Advertisement

ವನಿತಾ ಟಿ20: ಆಸೀಸ್‌ಗೆ ಆಘಾತವಿಕ್ಕಿದ ಭಾರತ

06:00 AM Oct 23, 2018 | Team Udayavani |

ಮುಂಬಯಿ: “ಎ’ ತಂಡಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಎಲ್ಲ 3 ಪಂದ್ಯಗಳನ್ನು ಸೋತಿದ್ದ ಆತಿಥೇಯ ಭಾರತ “ಎ’ ತಂಡವೀಗ ಟಿ20 ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಹೊರಟಂತಿದೆ. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಭಾರತ 4 ವಿಕೆಟ್‌ಗಳ ಜಯ ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ “ಎ’ 6 ವಿಕೆಟಿಗೆ 160 ರನ್‌ ಪೇರಿಸಿ ಸವಾಲೊಡ್ಡಿದರೆ, ಭಾರತ “ಎ’ 19 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ 163 ರನ್‌ ಪೇರಿಸಿ ಜಯ ಸಾಧಿಸಿತು. ಭಾರತದ ಜಯದಲ್ಲಿ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಬ್ಯಾಟಿಂಗ್‌ ಮಹತ್ವದ ಪಾತ್ರ ವಹಿಸಿತು. 4 ರನ್ನಿಗೆ 2 ವಿಕೆಟ್‌ ಬಿದ್ದ ಬಳಿಕ ಜತೆಗೂಡಿದ ಇವರು 3ನೇ ವಿಕೆಟಿಗೆ 116 ರನ್‌ ಪೇರಿಸಿ ಕಾಂಗರೂ ಬೌಲರ್‌ಗಳನ್ನು ಕಾಡಿದರು. ಮಂಧನಾ 40 ಎಸೆತಗಳಿಂದ 7 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 72 ರನ್‌ ಸಿಡಿಸಿದರೆ, ಕೌರ್‌ 39 ಎಸೆತಗಳಿಂದ 45 ರನ್‌ ಹೊಡೆದರು (6 ಬೌಂಡರಿ, 1 ಸಿಕ್ಸರ್‌). 

Advertisement

Udayavani is now on Telegram. Click here to join our channel and stay updated with the latest news.

Next