Advertisement
ಬುಧವಾರ ಬ್ರಿಸ್ಟಲ್‌ನಲ್ಲಿ ಈ ಸೆಣಸಾಟ ನಡೆಯಲಿದ್ದು ಈಗಾಗಲೇ 1-0 ಹಿನ್ನಡೆಯಲ್ಲಿರುವ ಮಿಥಾಲಿ ಪಡೆಗೆ ಸರಣಿಯನ್ನು ಸಮಬಲಕ್ಕೆ ತರುವ ನಿಟ್ಟಿನಲ್ಲಿ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಆತಿಥೇಯ ಹಾಗೂ ವಿಶ್ವ ಚಾಂಪಿಯನ್ ತಂಡವಾದ ಇಂಗ್ಲೆಂಡ್ ತನ್ನ ಖ್ಯಾತಿಗೆ ತಕ್ಕಂತೆ ಮೊದಲ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ್ದು ಇದೇ ಪರಾಕ್ರಮವನ್ನು ಈ ಪಂದ್ಯ ದಲ್ಲಿಯೂ ಮುಂದುವರೆಸಿ ಸರಣಿ ವಶಪಡಿಸುವ ಇರಾದೆಯಲ್ಲಿದೆ ಹೀತರ್ ನೈಟ್ ಪಡೆ. ಬೌಲಿಂಗ್‌ನಲ್ಲಿ ಸ್ಪಿನ್ನರ್ ಎಕ್ ಸ್ಟೋನ್, ಬ್ರಂಟ್ ಮತ್ತು ಅನ್ಯಾ ಶ್ರಬೊÕàಲ್ ಕೂಡ ನಿಯಂತ್ರಿತ ಬೌಲಿಂಗ್ ಮೂಲಕ ಪ್ರವಾಸಿಗರನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.