Advertisement

Asian Hockey 5s: ಭಾರತದ ವನಿತೆಯರ ಗೆಲುವಿನ ಓಟ

11:46 PM Aug 27, 2023 | Team Udayavani |

ಸಲಾಲ (ಒಮಾನ್‌): ವನಿತಾ ಏಷ್ಯನ್‌ ಹಾಕಿ ಫೈವ್ಸ್‌ ವಿಶ್ವಕಪ್‌ ಅರ್ಹತಾ ಹಾಕಿ ಪಂದ್ಯಾ ವಳಿಯಲ್ಲಿ ಭಾರತ ಗೆಲುವಿನ ಓಟ ಮುಂದುವರಿಸಿದೆ. ರವಿವಾರ ಭಾರೀ ಹೋರಾಟ ನಡೆಸಿ ಥಾಯ್ಲೆಂಡ್‌ ವಿರುದ್ಧ 5-4 ಅಂತರದಿಂದ ಗೆದ್ದು ಹ್ಯಾಟ್ರಿಕ್‌ ಸಾಧಿಸಿದೆ.

Advertisement

ಭಾರತ ಅತ್ಯಂತ ಆಕ್ರಮಣಕಾರಿ ಯಾಗಿಯೇ ಆಟ ಆರಂಭಿಸಿತು. ಪರಿಣಾಮವೆಂಬಂತೆ, ಪಂದ್ಯದ ಮೊದಲ ನಿಮಿಷದಲ್ಲೇ 2 ಗೋಲು ಸಿಡಿಯಿತು. ನವಜೋತ್‌ ಕೌರ್‌ ಗೋಲಿನ ಖಾತೆ ತೆರೆದರು. ಬೆನ್ನಲ್ಲೇ ದೀಪಿ ಟೋಪೊ ಗೋಲೊಂದನ್ನು ಸಿಡಿಸಿದರು. ಟೋಪೊ ಅವರಿಂದ 7ನೇ ನಿಮಿಷದಲ್ಲಿ ಮತ್ತೂಂದು ಗೋಲು ದಾಖಲಾಯಿತು. ಮಹಿಮಾ ಚೌಧರಿ 20ನೇ ನಿಮಿಷದಲ್ಲಿ, ಅಜ್ಮಿನಾ ಕುಜುರ್‌ 30ನೇ ನಿಮಿಷದಲ್ಲಿ ಮತ್ತೆರಡು ಗೋಲು ಹೊಡೆದರು.

ಥಾಯ್ಲೆಂಡ್‌ ಕೂಡ ಆಕ್ರಮಣ ದಲ್ಲಿ ಹಿಂದುಳಿಯಲಿಲ್ಲ. 19 ನಿಮಿಷ ಗಳೊಳಗಾಗಿ 4 ಗೋಲು ಬಾರಿಸಿತು. 4-3ರ ಮುನ್ನಡೆಯನ್ನೂ ಸಾಧಿಸಿತು. ಅನಂತರ ಭಾರತ ತಿರುಗಿ ಬಿತ್ತು. ಮೊದಲೆರಡು ಕ್ವಾರ್ಟರ್‌ಗಳಲ್ಲಿ ಪಂದ್ಯದ ಅಷ್ಟೂ ಗೋಲುಗಳು ದಾಖಲಾದವು.

ಭಾರತ ಮೊದಲೆರಡು ಪಂದ್ಯ ಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಮಲೇಷ್ಯಾವನ್ನು 7-2 ಅಂತರದಿಂದ, ಜಪಾನ್‌ ತಂಡವನ್ನು 7-1 ಅಂತರದಿಂದ ಮಣಿಸಿತ್ತು. ಆದರೆ ಥಾಯ್ಲೆಂಡ್‌ ಸವಾಲು ಮಾತ್ರ ಸುಲಭದ್ದಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next