Advertisement

Karachi ಭಾರತೀಯ ಮಹಿಳೆಯ ವಡಾಪಾವ್‌, ಪಾವ್‌ಭಾಜಿ ಕಮಾಲ್‌!

12:01 AM May 13, 2024 | Team Udayavani |

ಹೊಸದಿಲ್ಲಿ: “ಕವಿತಾ ದೀದಿ ಕಾ ಇಂಡಿಯನ್‌ ಖಾನಾ’ ಸದ್ಯ ಈ ವೀಡಿಯೋ ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಪಾಕಿಸ್ಥಾನದ ಕರಾಚಿ ರೈಲು ನಿಲ್ದಾಣದ ಬಳಿ ಗುಜರಾತ್‌ ಮೂಲದ ಕವಿತಾ ಹಾಗೂ ಅವರ ಕುಟುಂಬ ಸಣ್ಣ ಫ‌ುಡ್‌ ಸ್ಟಾಲ್‌ ನಡೆ ಸುತ್ತಿದ್ದು, ಇವರಲ್ಲಿ ಸಿಗುವ ವಡಾಪಾವ್‌, ಪಾವ್‌ಭಾಜಿ ಪಾಕಿಸ್ಥಾನ ಜನರ ಬಾಯಲ್ಲೂ ನೀರೂರಿಸು ತ್ತಿದೆ. ಕರ್‌ಮತ್‌ ಖಾನ್‌ ಎಂಬ ವ್ಲಾಗರ್‌ ಈ ಫ‌ುಡ್‌ ಸ್ಟಾಲ್‌ನಲ್ಲಿ ಸಿಗುವ ರುಚಿಕರ ಖಾದ್ಯಗಳ ಕುರಿತು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮ್ಮಲ್ಲಿ ವೆಜ್‌ ಹಾಗೂ ನಾನ್‌ ವೆಜ್‌ ಖಾದ್ಯ ತಯಾರಿಸುತ್ತೇವೆ ಎಂದು ಕವಿತಾ ವೀಡಿಯೊದಲ್ಲಿ ಹೇಳಿದ್ದಾರೆ. ಕರಾಚಿಯ ಆಹಾರ ಪ್ರಿಯರು ಕವಿತಾ ಅವರನ್ನು ಕವಿತಾ ದೀದಿ ಎಂದು ಕರೆಯುತ್ತಾರೆ ಎಂದು ಖಾನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next