Advertisement

ಅಬುಧಾಬಿಯಲ್ಲಿ 17.5 ಕೋಟಿ ಜ್ಯಾಕ್‌ಪಾಟ್‌ ಗೆದ್ದ ಕೇರಳಿಗ

04:12 PM Feb 05, 2018 | udayavani editorial |

ದುಬೈ : ಅಬುಧಾಬಿಯಲ್ಲಿ ನೆಲೆಸಿರುವ ಕೇರಳದ ಸುನಿಲ್‌ ಮಾಪಟ್ಟಾ ಕೃಷ್ಣನ್‌ ಕುಟ್ಟಿ ನಾಯರ್‌ ಅವರು 17.5 ಕೋಟಿ ರೂ. ಮೌಲ್ಯದ ಲಾಟರಿಯನ್ನು ಗೆದ್ದುಕೊಂಡು ಕೋಟ್ಯಧೀಶರಾಗಿದ್ದಾರೆ ಎಂದು ಮಾದ್ಯಮ ವರದಿಗಳು ತಿಳಿಸಿವೆ. 

Advertisement

ಕೃಷ್ಣನ್‌ ಕುಟ್ಟಿ ನಾಯರ್‌ ಅವರು ಎರಡನೇ ಅತೀ ದೊಡ್ಡ ಮೊತ್ತದ ಲಾಟರಿ ಬಹುಮಾನವಾಗಿ 10 ದಶಲಕ್ಷ ಧಿರಮ್‌ಗಳನ್ನು (ಅಂದಾಜು 17,68 00,000 ರೂ.) ಮನೆಗೆ ಒಯ್ಯಲಿದ್ದಾರೆ ಎಂದು ಗಲ್ಫ್ ನ್ಯೂಸ್‌ ವರದಿಮಾಡಿದೆ.

ಅತ್ಯಂತ ದುಬಾರಿ ಎನಿಸುವ 500 ಧಿರಮ್‌ ಬೆಲೆಯ ರಾಫೆಲ್‌ ಟಿಕೆಟನ್ನು ಸಾಮಾನ್ಯವಾಗಿ ಕೆಲ ವ್ಯಕ್ತಿಗಳು ಜತೆಗೂಡಿ ಖರೀದಿಸಿ ಬಹುಮಾನ ಬಂದಾಗ ಅದನ್ನು ಹಂಚಿಕೊಳ್ಳುವ ರೂಢಿ ಎಂದು 
ಗಲ್ಫ್ ನ್ಯೂಸ್‌ ವರದಿ ಹೇಳಿದೆ. 

ನಾಯರ್‌ ಅವರು ತಮಗೆ ಸಿಕ್ಕಿರುವ ಈ ಬೃಹತ್‌ ಮೊತ್ತದ ಬಹುಮಾನವನ್ನು ತಮ್ಮ ಮೂವರು ಸ್ನೇಹಿತರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಟಿಕೆಟ್‌ ದರಕ್ಕೆ ವಂತಿಗೆ ನೀಡಿದ್ದ ಅವರ ಸಹೋದ್ಯೋಗಿ ಹೇಳಿದ್ದಾರೆ. 

ಈ ವರ್ಷ ಜನವರಿ 7ರಂದು ನಡೆದಿದ್ದ  12 ದಶಲಕ್ಷ ಧಿರಮ್‌ಗಳ ಬಹುಮಾನದ “ಬಿಗ್‌ ಟಿಕೆಟ್‌ ಡ್ರಾ’ ನಲ್ಲಿ ಕೇರಳದ ಹರಿಕೃಷ್ಣನ್‌ ವಿ ನಾಯರ್‌ ಬೃಹತ್‌ ಮೊತ್ತದ ಬಹುಮಾನವನ್ನು ಗೆದ್ದಿದ್ದರು. ಅವರು ಅಜ್‌ಮಾನ್‌ ವಾಸಿಯಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next