ಇಂಡಿಯನ್ ವೆಲ್ಸ್ (ಕ್ಯಾಲಿಫೋರ್ನಿಯ): ಸ್ಪೇನ್ನ ಕಾರ್ಲೋಸ್ ಅಲ್ಕರಾಜ್ “ಇಂಡಿಯನ್ ವೆಲ್ಸ್’ ರಾಜನಾಗಿ ಮುಂದುವರಿದಿದ್ದಾರೆ. ಫೈನಲ್ನಲ್ಲಿ ಅವರು ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ವಿರುದ್ಧ 7-6 (5), 6-1 ನೇರ ಸೆಟ್ಗಳ ಜಯ ಸಾಧಿಸಿ ಪ್ರಶಸ್ತಿ ಉಳಿಸಿಕೊಂಡರು.
ಇದು ಕಳೆದ ವರ್ಷದ ಫೈನಲ್ ಪಂದ್ಯದ ಪುನರಾವರ್ತನೆ ಆಗಿತ್ತು. ಅಂದು ಕೂಡ ಮೆಡ್ವೆಡೇವ್ ಅವರನ್ನು ಮಣಿಸಿಯೇ ಅಲ್ಕರಾಜ್ ಚಾಂಪಿಯನ್ ಆಗಿದ್ದರು.
ಸ್ವಿಯಾಟೆಕ್ ಗೆಲುವು
ವನಿತೆಯರ ಫೈನಲ್ನಲ್ಲಿ ಪೋಲೆಂಡ್ನ ಇಗಾ ಸ್ವಿಯಾಟೆಕ್ ಚಾಂಪಿಯನ್ ಆಗಿ ಮೂಡಿಬಂದರು. ಫೈನಲ್ನಲ್ಲಿ ಅವರು ಗ್ರೀಸ್ನ ಮರಿಯಾ ಸಕ್ಕರಿ ವಿರುದ್ಧ 6-4, 6-0 ಅಂತರದ ಗೆಲುವು ಸಾಧಿಸಿದರು.
ಇದು 2022ರ ಫೈನಲ್ ಪಂದ್ಯದ ರೀ ಮ್ಯಾಚ್ ಆಗಿತ್ತು. ಎರಡು ವರ್ಷಗಳ ಹಿಂದಿನ ಪ್ರಶಸ್ತಿ ಸಮರದಲ್ಲಿ ಸಕ್ಕರಿ ವಿರುದ್ಧ ಸ್ವಿಯಾಟೆಕ್ 6-4, 6-1 ಅಂತರದ ಗೆಲುವು ಸಾಧಿಸಿದ್ದರು.
ಸೆಮಿಫೈನಲ್ನಲ್ಲಿ ಕೊಕೊ ಗಾಫ್ ವಿರುದ್ಧ 3 ಸೆಟ್ಗಳ ಹೋರಾಟದಲ್ಲಿ ಮರಿಯಾ ಸಕ್ಕರಿಗೆ ಗೆಲುವು ಒಲಿದಿತ್ತು. ಇಗಾ ಸ್ವಿಯಾಟೆಕ್ಗೆ ಶರಣಾದವರು ಮಾರ್ಟಾ ಕೋಸ್ಟುéಕ್.