Advertisement

12ರ ಹರೆಯದ ಭಾರತೀಯ ಯುವ ಕ್ರಿಕೆಟಿಗ ಲಂಕೆಯಲ್ಲಿ ಸಾವು

11:09 AM Sep 07, 2017 | Team Udayavani |

ಹೊಸದಿಲ್ಲಿ : ಹದಿನೇಳರ ಕೆಳ ಹರೆಯದ ತಂಡದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಹನ್ನೆರಡು ವರ್ಷ ಪ್ರಾಯದ ಗುಜರಾತಿನ ಭಾರತೀಯ ಕ್ರಿಕೆಟಿಗನೋರ್ವ ಶ್ರೀಲಂಕಾದಲ್ಲಿ ಈಜು ಕೊಳದಲ್ಲಿ ಮುಳುಗಿ ಮೃತ ಪಟ್ಟ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ವರದಿಯಾಗಿದೆ.

Advertisement

ಲಂಕಾ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ 17ರ ಕೆಳ ಹರೆಯದ ತಂಡದ ನಾಲ್ವರು ಸದಸ್ಯರೊಂದಿಗೆ ಪಮನುಗಾಮಾದಲ್ಲಿನ ಹೊಟೇಲ್‌ ಒಂದರ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿದೆ. ನೀರಲ್ಲಿ ಮುಳುಗಿದ ಯುವ ಕ್ರಿಕೆಟಿಗನನ್ನು ತತ್‌ಕ್ಷಣವೇ ಪಮನುಗಾಮಾ ಆಸ್ಪತ್ರೆಗೆ ಒಯ್ಯಲಾಯಿತಾದರೂ ಆತ ಚಿಕಿತ್ಸೆಗೆ ಮುನ್ನವೇ ಕೊನೆಯುಸಿರೆಳೆದನೆಂದು ವರದಿ ತಿಳಿಸಿದೆ. 

ಮೃತ ಕ್ರಿಕೆಟಿಗನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಗಾಮಾ ಟೀಚಿಂಗ್‌ ಹಾಸ್ಪಿಟಲ್‌ಗೆ ಒಯ್ಯಲಾಗಿದೆ; ಪೊಲೀಸ್‌ ತನಿಖೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next