ವಿಷಯ ಹೀಗಿರುತ್ತಾ, ಭಾರತಕ್ಕಿಂತ ಒಂದು ದಿನ ಮುಂಚಿತವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಪಾಕಿಸ್ಥಾನಕ್ಕೆ ಭಾರತೀಯರು ಶುಭಾಶಯ ಕೋರುತ್ತಿದ್ದಾರೆ. ಆದರೆ ಅದರಲ್ಲೂ ಒಂದು ವಿಶೇಷತೆ ಇದೆ. #HappyBirthdayBeta ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವಿಟ್ಟರ್ ನಲ್ಲಿ ಪಾಕಿಸ್ಥಾನಕ್ಕೆ ಸ್ವಾತಂತ್ರ್ಯ ಶುಭಾಶಯ ಕೋರುವ ಸಂದೇಶಗಳು ಹರಿದಾಡುತ್ತಿವೆ. ವಿಶೇಷವೆಂದರೆ ಈ ಹ್ಯಾಷ್ ಟ್ಯಾಗ್ ದೇಶದ ಇಂದಿನ ಟ್ರೆಂಡಿಂಗ್ ಹ್ಯಾಷ್ ಟ್ಯಾಗ್ ಗಳಲ್ಲಿ ಐದನೇ ಸ್ಥಾನದಲ್ಲಿದೆ! ಈ ಹ್ಯಾಷ್ ಟ್ಯಾಗ್ ನಲ್ಲಿ ಇದುವರೆಗೆ 13 ಸಾವಿರಕ್ಕೂಹೆಚ್ಚು ಟ್ವೀಟ್ ಗಳು ಪೋಸ್ಟ್ ಆಗಲ್ಪಟ್ಟಿವೆ.
Advertisement
ಈ ಬಾರಿಯ ಸ್ವಾತಂತ್ರ್ಯ ದಿನವನ್ನು ಪಾಕಿಸ್ಥಾನದಲ್ಲಿ ‘ಕಾಶ್ಮೀರ ಸಾರ್ವಭೌಮತೆ’ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಾಶ್ಮೀರಕ್ಕೆ ವಿಶೇಷ ಅಧಿಕಾರವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ಭಾರತ ಸರಕಾರ ರದ್ದುಗೊಳಿಸಿದ್ದನ್ನು ವಿರೋಧಿಸಿ ಪಾಕಿಸ್ಥಾನದಲ್ಲಿ ಕಾಶ್ಮೀರ ಬೆಂಬಲವಾಗಿ ಸಾರ್ವಭೌಮತಾ ದಿನಾಚರಣೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ‘ಕಾಶ್ಮೀರ್ ಬನೇಗಾ ಪಾಕಿಸ್ಥಾನ್’ (ಕಾಶ್ಮೀರ ಪಾಕಿಸ್ಥಾನಕ್ಕೆ ಸೇರುತ್ತದೆ) ಎಂಬ ತಲೆಬರಹವುಳ್ಳ ಬರಹಗಳನ್ನು ಇಂದಿನ ಸಾರ್ವಭಾಮತೆ ದಿನಾಚರಣೆಯ ಸಂದರ್ಭದಲ್ಲಿ ಬಳಸಲಾಗುತ್ತಿದೆ.ಪಾಕಿಸ್ಥಾನದ ಈ ಅತಿರೇಕದ ವರ್ತನೆಗೂ ಟ್ವಿಟ್ಟರ್ ನಲ್ಲಿ ಭಾರತೀಯರು ಖಾರವಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಹುಟ್ಟು ಹಬ್ಬದ ಶುಭಾಶಯಗಳು ಮಗನೇ, ನಮ್ಮಂತಹ ಅಪ್ಪನನ್ನು ಪಡೆಯಲು ನೀನು ಪುಣ್ಯ ಮಾಡಿರಬೇಕು’ ಎಂದು ಕೆಲವು ಟ್ವಿಟ್ಟರಿಗರು ಪಾಕಿಸ್ಥಾನಕ್ಕೆ ಸ್ವಾತಂತ್ರ್ಯದ ಶುಭಾಶಯ ಕೋರಿದ್ದಾರೆ.