Advertisement

ಬೊಂಬೆ ಜಾತ್ರೆಗೆ ತೆರೆ: ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

02:09 PM Mar 06, 2021 | Team Udayavani |

ಚನ್ನಪಟ್ಟಣ: ಆತ್ಮನಿರ್ಭರ ಯೋಜನೆಯಲ್ಲಿ ದೇಶಿ ಆಟಿಕೆಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಆರಂಭಿಸಿದ ವರ್ಚುವಲ್‌ ಬೊಂಬೆ ಜಾತ್ರೆಗೆ ತೆರೆಬಿದ್ದಿದೆ. ಚನ್ನಪಟ್ಟಣದ ಚಂದದ ಬೊಂಬೆಗಳಿಗೆಗ್ರಾಹಕರು ಉತ್ತಮ ಪ್ರತಿಕ್ರಿಯೆ ತೋರಿದ್ದು, ಬೊಂಬೆ ತಯಾರಕರ ಮೊಗದಲ್ಲಿ ನಗು ಅರಳುವಂತೆ ಮಾಡಿದೆ.

Advertisement

ಫೆ.27ರಂದು ಪ್ರಧಾನಿ ಮೋದಿ ಅವರಿಂದಉದ್ಘಾಟನೆಗೊಂಡ ಟಾಯ್‌ ಫೇರ್‌ಇಂಡಿಯಾ ವನ್ನು ನಾಲ್ಕು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿತ್ತು. ಬೊಂಬೆ ಮೇಳಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಎರಡು ದಿನಗಳ ಕಾಲ ವಿಸ್ತರಿಸಲಾಯಿತು.

1.20 ಲಕ್ಷ ಗ್ರಾಹಕರು ವೀಕ್ಷಣೆ: ವರ್ಚುವಲ್‌ನಲ್ಲಿ ಟಾಯ್‌ಫೇರ್‌ ಆರಂಭಿಸುವ ಮೂಲಕ ದೇಶಿ ಬೊಂಬೆಗಳ ಮಾರಾಟಕ್ಕೆ ಬೃಹತ್‌ ಆನ್‌ಲೈನ್‌ ವೇದಿಕೆನಿರ್ಮಿಸಲಾಗಿತ್ತು. ಪ್ರಧಾನಿಯಿಂದ ಈ ಜಾತ್ರೆಗೆಚಾಲನೆ ದೊರೆತಿದ್ದು, ಹೆಚ್ಚಿನ ಪ್ರಚಾರ ದೊರೆಯಲು ಸಹಕಾರಿಯಾಯಿತು. ಚನ್ನ ಪಟ್ಟಣದ ಬೊಂಬೆಗಳ ಬಗ್ಗೆ ಪ್ರಧಾನಮಂತ್ರಿ ಹೆಚ್ಚಿನ ಆಸಕ್ತಿ ತೋರಿಸಿದ್ದು, ಇಲ್ಲಿನ ಬೊಂಬೆಗಳ ಬಗ್ಗೆ ಪ್ರಶಂಸಿದ್ದರಿಂದ ಬೊಂಬೆಗಳ ಜಾತ್ರೆಯಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕೆ ಸಹಕಾರಿಯಾಗಿದ್ದು, 1.20 ಲಕ್ಷ ಗ್ರಾಹಕರು ಚನ್ನಪಟ್ಟಣದ ಬೊಂಬೆ ಮಳಿಗೆಗಳನ್ನು ವೀಕ್ಷಣೆ ಮಾಡಿದ್ದಾರೆ. ಚನ್ನಪಟ್ಟಣದ ಬೊಂಬೆಗಳ ಖರೀದಿಗೆ ಆನ್‌ ಲೈನ್‌ ಮೇಳದಲ್ಲಿ ಹೆಚ್ಚಿನ ಉತ್ಸಾಹ ತೋರಿರುವ ಗ್ರಾಹಕರು ಸಾಕಷ್ಟು ಖರೀದಿಗೆ ಮುಂದಾಗಿದ್ದು, 2ಲಕ್ಷ ರೂ.ಗಳಷ್ಟು ಮಾರಾಟ ನಡೆದಿದೆ. ಇನ್ನೂಸಾಕಷ್ಟು ಬೊಂಬೆಗಳಿಗೆ ಬೇಡಿಕೆ ಬಂದಿದೆ. ಆನ್‌ಲೈನ್‌ ಮಾರಾಟ ಜಾತ್ರೆಯಲ್ಲಿ ಚನ್ನಪಟ್ಟಣದ ಬೊಂಬೆಗಳ ಸುಗ್ಗಿಕಾಲ ಎದುರಾಗಿದೆ.

ಬೊಂಬೆ ಖರೀದಿಗೆ ಮುಂದು: ಆಸ್ಟೇಲಿಯಾ, ಬೆರೂಲಿನ್‌, ಸಿಂಗಾಪೂರ್‌, ಯುಕೆನಿಂದಲೂ ವಿದೇಶಿಗರು ಚನ್ನಪಟ್ಟಣದ ಬೊಂಬೆ ಖರೀದಿಗೆ ಮುಂದು ಬಂದಿರುವುದು, ಈ ವರ್ಚುವಲ್‌ ಪ್ರದರ್ಶನ ಚನ್ನ ಪಟ್ಟಣದ ಆಟಿಕೆಗಳನ್ನು ಜಾಗತಿಕ ಮೈದಾನಕ್ಕೆ ಕೊಂಡೊಯ್ಯಲು ಸೇತುವೆಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಚನ್ನಪಟ್ಟಣದ ಬೊಂಬೆಗಳ ಖರೀದಿಗೆ ಮೊದಲ ದಿನವೇ ಗ್ರಾಹಕರು ಮುಂದಾಗಿದ್ದು ಕಂಡು ಬಂದಿತು. ಚನ್ನಪಟ್ಟಣದ 15 ಮಳಿಗೆಗಳ ಪೈಕಿ ಕೆಲ ಮಳಿಗೆಗಳಲ್ಲಿ ಗ್ರಾಹಕರು ಮೊದಲ ದಿನದಿಂದಲೇ ಬೊಂಬೆಗಳನ್ನು ಖರೀದಿಸಲು ಮುಂದಾಗಿದ್ದು, ಫೆ.27ರಂದೇ ಕೆಲ ಮಳಿಗೆಗಳಲ್ಲಿ 2 ಸಾವಿರದಿಂದ 5ಸಾವಿರ ರೂ.ವರೆಗೆ ಬೊಂಬೆಗಳ ಮಾರಾಟನಡೆದಿತ್ತು. ಮೇಳದ ಕೊನೆಯ ದಿನದ ವೇಳೆಗೆ ಈ ವಹಿವಾಟಿನ ಪ್ರಮಾಣ 2 ಲಕ್ಷ ದಾಟಿದೆ.

25 ಲಕ್ಷ ಮಂದಿ ನೋಂದಣಿ: 6 ದಿನಗಳ ಕಾಲ ನಡೆದ ಇಂಡಿಯನ್‌ ಟಾಯ್‌ಫೇರ್‌-2021ರ ಆನ್‌ ಲೈನ್‌ ಪೋರ್ಟಲ್‌ಗೆ 40 ಲಕ್ಷ ಮಂದಿ ಭೇಟಿ ನೀಡಿದ್ದು, ಈ ಪೈಕಿ 25 ಲಕ್ಷ ಮಂದಿ ನೋಂದಣಿ ಮಾಡಿ ಕೊಂಡಿರುವುದು ಬೊಂಬೆಗಳ ಜಾತ್ರೆಗೆ ಅಭೂತ ಪೂರ್ವ ಯಶಸ್ಸು ದೊರೆತಿರುವುದಕ್ಕೆ ಸಾಕ್ಷಿಯಾಗಿದೆ.ಬೊಂಬೆ ಉದ್ಯಮಕ್ಕೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಸೆಮಿನಾರ್‌ ಗಳನ್ನು 6 ದಿನಗಳ ಈ ಜಾತ್ರೆಯಲ್ಲಿ ನಡೆಸಿದ್ದು, ಇದರಿಂದ ಬೊಂಬೆ ಉದ್ಯಮಕ್ಕೆ ಹೊಸದಿಕ್ಕು ನೀಡಲು ಸಹಕಾರಿಯಾಗಿದೆ. ಇನ್ನು ಕಳೆದ ನಾಲ್ಕು ದಿನಗಳ ಕಾಲ ನಡೆದ ಆನ್‌ ಲೈನ್‌ ಬೊಂಬೆ ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದ ಒಟ್ಟಾರೆ. 22 ಲಕ್ಷಕ್ಕೂ ಅಧಿಕ ಮಂದಿ ಎನ್‌ರೋಲ್‌ ಆಗಿದ್ದಾರೆ.

Advertisement

ಇನ್ನು ಪ್ರದರ್ಶನದಲ್ಲಿ ಬೊಂಬೆ ಮಾರಾಟ ಮತ್ತು ಪ್ರದರ್ಶನದ ಕುರಿತು ಅಧಿಕಾರಿಗಳು ಕರಕುಶಲ ಕರ್ಮಿಗಳಿಗೆ ತರಬೇತಿ ನೀಡಲಾಗಿತ್ತು.

ವರ್ಚುವಲ್‌ ಇವೆಂಟ್‌ನಲ್ಲಿ ಚನ್ನ ಪಟ್ಟಣ ಬೊಂಬೆಗಳಿಗೆ ಉತ್ತಮಪ್ರತಿಕ್ರಿಯೆ ದೊರೆತಿದೆ. ಕರ ಕುಶಲ ಕರ್ಮಿಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡುವಲ್ಲಿ ಟಾಯ್‌ಫೇರ್‌ ಸಫಲ ಗೊಂಡಿದ್ದು, ವಿದೇಶಿ ಗ್ರಾಹಕರು ಈ ಬೊಂಬೆಗಳ ಖರೀದಿಗೆ ಮುಂದಾಗಿದ್ದಾರೆ. ಸುನೀಲ್ ಕುಮಾರ್, ಸಹಾಯಕನಿರ್ದೇಶಕ, ಡಿಸಿಎಚ್, ಮೈಸೂರು ವಿಭಾಗ

ಆನ್‌ಲೈನ್‌ನಲ್ಲಿ ತೆರೆದಿದ್ದ ನನ್ನ ಮಳಿಗೆಗೆ 5 ಲಕ್ಷ ರೂ. ಆರ್ಡರ್‌ ಬಂದಿದೆ. ನಾಲ್ಕು ಮಂದಿ ವಿದೇಶಿಯರು ಖರೀದಿ ಮಾಡಿದ್ದಾರೆ. ದೇಶದ ವಿವಿಧ ರಾಜ್ಯದಿಂದ ನನಗೆ ಆರ್ಡರ್‌ ಬಂದಿದೆ. ವರ್ಚುವಲ್ ‌ಟಾಯ್‌ಫೇರ್‌ ಬೊಂಬೆಗಳ ಮಾರಾಟಕ್ಕೆ ಸಹಕಾರಿಯಾಗಿದೆ. ಸುಹೇಲ್, ಭಾರತ್ ಆರ್ಟ್ ಆಂಡ್ ಕ್ರಾಫ್ಟ್ ಮಳಿಗೆ, ಚನ್ನಪಟ್ಟಣ.

Advertisement

Udayavani is now on Telegram. Click here to join our channel and stay updated with the latest news.

Next