Advertisement

ಲಡಾಖ್‌ಗೆ ಟೂರ್‌ ಇನ್ನು ಬಲು ಸುಲಭ!

08:58 PM Aug 07, 2021 | Team Udayavani |

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಈವರೆಗೆ ಜಾರಿಯಲ್ಲಿದ್ದ ಜಮ್ಮು ಕಾಶ್ಮೀರ ಪ್ರವೇಶ ನಿರ್ಬಂಧವನ್ನು (ಇನ್ನರ್‌ ಲೈನ್‌ ಪರ್ಮಿಟ್‌-ಐಎಲ್‌ಪಿ) ತೆಗೆದುಹಾಕಲಾಗಿದ್ದು, ಇನ್ನು ಮುಂದೆ ದೇಶ ನಿವಾಸಿಗಳು, ಸರ್ಕಾರದಿಂದ ಗುರುತಿಸಲ್ಪಟ್ಟಿರುವ ಲಡಾಖ್‌ನ ಸುರಕ್ಷಿತ ಪ್ರದೇಶಗಳಿಗೆ ಯಾವುದೇ ಪರವಾನಗಿ ಇಲ್ಲದೆ ಪ್ರವಾಸ ಹೋಗಿಬರಬಹುದಾಗಿದೆ. ಇದರ ಜೊತೆಯಲ್ಲೇ, ಲಡಾಖ್‌ ಪೊಲೀಸ್‌ ಇಲಾಖೆಯಲ್ಲಿ “ಟೂರಿಸ್ಟ್‌ ವಿಂಗ್‌’ ಎಂಬ ಪ್ರತ್ಯೇಕ ಕಾವಲು ಪಡೆಯನ್ನೂ ರಚಿಸಲಾಗಿದೆ.

Advertisement

ಈ ಕುರಿತಂತೆ, ಲಡಾಖ್‌ನ ಎಲ್ಲಾ ಜಿಲ್ಲೆಗಳ ಪೊಲೀಸ್‌ ಸೂಪರಿಂಟೆಂಡೆಂಟ್‌ ಹಾಗೂ ಹೆಚ್ಚುವರಿ ಸೂಪರಿಂಟೆಂಡೆಂಟ್‌ ಕಚೇರಿಗಳಿಗೆ ಅಧಿಕೃತ ಆದೇಶ ರವಾನಿಸಿರುವ ಲಡಾಖ್‌ನ ಲೆಫ್ಟಿನೆಂಟ್‌ ಜನರಲ್‌ ಆರ್‌.ಕೆ. ಮಾಥುರ್‌, ಲಡಾಖ್‌ನ ವಿವಿಧ ಸುರಕ್ಷಿತ ಪ್ರದೇಶಗಳಲ್ಲಿರುವ ನಾಗರಿಕರಿಗೆ ಪ್ರತ್ಯೇಕವಾದ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆ ಮಾಡಬೇಕು. ಜೊತೆಗೆ, ಸುರಕ್ಷಿತ ವಲಯಗಳಲ್ಲಿರುವ ಜನತೆಗೆ, ಅವರ ಅಕ್ಕಪಕ್ಕದ ಜಿಲ್ಲೆ ಅಥವಾ ತಾಲೂಕುಗಳಲ್ಲಿರುವ ಸುರಕ್ಷಿತ ವಲಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.

ಈವರೆಗೆ, ಲಡಾಖ್‌ನ ಆಂತರಿಕ ಭಾಗಗಳಿಗೆ ಹೋಗಿಬರಲು ಅವಕಾಶವಿತ್ತಾದರೂ ಅದಕ್ಕೆ ಸ್ಥಳೀಯಾಡಳಿತದಿಂದ ಐಎಲ್‌ಪಿ ಪರವಾನಗಿ ಪಡೆಯುವುದು ಕಡ್ಡಾಯವಾಗಿತ್ತು. ಲಡಾಖ್‌ನ ಸುರಕ್ಷಿತ ವಲಯಗಳಲ್ಲಿರುವ ಜನರೂ, ಅದೇ ಪ್ರಾಂತ್ಯದ ಬೇರೊಂದು ಸುರಕ್ಷಿತ ವಲಯಗಳಿಗೆ ಭೇಟಿ ನೀಡುವಾಗಲೂ ಈ ಪರವಾನಿಯನ್ನು ಅಗತ್ಯವಾಗಿ ಪಡೆಯಬೇಕಿತ್ತು. ಆದರೀಗ, ಐಎಲ್‌ಪಿ ಅಗತ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next