Advertisement

ವಂಚನೆ ಅಪರಾಧ ಎಸಗಿದ ಭಾರತೀಯ ಅಮೆರಿಕನ್‌ ವ್ಯಕ್ತಿಗೆ ಪೌರತ್ವ ನಷ್ಟ

12:25 PM Jul 13, 2017 | udayavani editorial |

ನ್ಯೂಯಾರ್ಕ್‌ : ವಂಚನೆ ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣಿಸಲ್ಪಟ್ಟಿರುವ ಹಾಗೂ ತಾನು 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಗೈದ ವಿಷಯವನ್ನು ವಲಸೆ ಅಧಿಕಾರಿಗಳಿಂದ ಮುಚ್ಚಿಟ್ಟ ಕಾರಣಕ್ಕೆ 37ರ ಹರೆಯದ ಭಾರತೀಯ ಅಮೆರಿಕನ್‌ ಪ್ರಜೆ ಗುರುಪ್ರೀತ್‌ ಸಿಂಗ್‌ ಅಮೆರಿಕನ್‌ ಪೌರತ್ವವನ್ನು ಕಳೆದುಕೊಂಡಿದ್ದಾರೆ. 

Advertisement

ವಾಟರ್‌ ಟೌನ್‌ ವಾಸಿಯಾಗಿರುವ ಗುರುಪ್ರೀತ್‌ ಸಿಂಗ್‌ ಅವರಿಗೆ ಸಿರಾಕ್ಯೂಸ್‌ನಲ್ಲಿನ ಫೆಡರಲ್‌ ನ್ಯಾಯಾಲಯ ವಂಚನೆ ಅಪರಾಧಕ್ಕಾಗಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆಯಲ್ಲದೆ ಅದನ್ನು ಅನುಭವಿಸಿದ ಬಳಿಕ ಮೂರು ವರ್ಷಗಳ ಅವಧಿಗೆ ಪೊಲೀಸ್‌ ವಿಚಕ್ಷಣೆಗೆ ಒಳಪಡಬೇಕೆಂದು ಆದೇಶಿಸಿದೆ. 

ಗುರುಪ್ರೀತ್‌ ಸಿಂಗ್‌ ಅವರು ಕಾನೂನುಬಾಹಿರವಾಗಿ ಅಮೆರಿಕ ಪೌರತ್ವ ಪಡೆದು ವಂಚಿಸಿರುವುದಾಗಿ  ನ್ಯಾಯಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next