Advertisement

ರಷ್ಯಾದ ‘ಸ್ಕಿಲ್ಸ್ ಒಲಂಪಿಕ್ಸ್’ನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

10:28 AM Aug 25, 2019 | Team Udayavani |

ರಷ್ಯಾದ ಖಝಾನ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕಿಲ್ಸ್-2019ರಲ್ಲಿ 48 ಜನರ ಭಾರತೀಯ ತಂಡವೂ ಸಹ ಪಾಲ್ಗೊಂಡಿದೆ. ಇದಕ್ಕೆ ಕೌಶಲ ಒಲಂಪಿಕ್ಸ್ ಎಂಬ ಹೆಸರೂ ಇದೆ. ಈ ಸಮಾರಂಭದ ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಭಾರತ ತಂಡದ ಸದಸ್ಯರು ತ್ರಿವರ್ಣ ಧ್ವಜವನ್ನು ಹಿಡಿದು ಹೆಮ್ಮೆಯಿಂದ ಸಾಗಿದರು.

Advertisement

ಇಲ್ಲಿ ನಡೆಯುವ ವಿವಿಧ ಕೌಶಲ ಪ್ರದರ್ಶನ ಸ್ಪರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ತಂಡದ ಸದಸ್ಯರು ತಮ್ಮ ಕೌಶಲಗಳನ್ನು ಪ್ರದರ್ಶಿಸಲಿದ್ದಾರೆ.

ಈ ಕೂಟದಲ್ಲಿ ಭಾಗವಹಿಸುತ್ತಿರುವ ಆರನೇ ದೊಡ್ಡ ತಂಡವಾಗಿ ಭಾರತ ಗುರುತಿಸಲ್ಪಟ್ಟಿದೆ. ಆಗಸ್ಟ್ 22 ರಿಂದ 27ರವರೆಗೆ ಈ ಕೂಟವು ರಷ್ಯಾದ ಖಝಾನ್ ನಲ್ಲಿ ನಡೆಯಲಿದೆ. 60 ದೇಶಗಳ ಸುಮಾರು 1500 ಸ್ಪರ್ಧಿಗಳು 56 ಕೌಶಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮೊಬೈಲ್ ರೊಬೋಟಿಕ್ಸ್, ಕೇಶ ವಿನ್ಯಾಸ, ಬ್ಯಾಂಕಿಂಗ್, ವೆಲ್ಡಿಂಗ್, ಕಾರು ಪೈಂಟಿಂಗ್ ಸೇರಿದಂತೆ 44 ಸ್ಪರ್ಧೆಗಳಲ್ಲಿ ಭಾರತೀಯ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

2017ರಲ್ಲಿ ಅಬು ಧಾಬಿಯಲ್ಲಿ ನಡೆದಿದ್ದ ಈ ಕೂಟದಲ್ಲಿ ಭಾರತವು 28 ವಿಭಾಗಗಳಲ್ಲಿ ಸ್ಪರ್ಧಿಸಿತ್ತು ಮತ್ತು ಒಂದು ಬೆಳ್ಳಿ, ಒಂದು ಕಂಚು ಮತ್ತು ಒಂಭತ್ತು ಪದಕಗಳು ಉತ್ಕೃಷ್ಟತೆಗೆ ಲಭಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next