ಮುಂಬಯಿ: ಶೀಘ್ರದಲ್ಲೇ ಟೀಮ್ ಇಂಡಿಯಾದ ನಾಯಕತ್ವ ಹಂಚಿಕೆಯಾಗಲಿದೆ ಎಂದು ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಭವಿಷ್ಯ ನುಡಿದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಒತ್ತಡವನ್ನು ನಿಭಾಯಿಸುವ ಉದ್ದೇಶದಿಂದ ಇಂದು ಬಹುತೇಕ ಎಲ್ಲ ತಂಡಗಳೂ ನಾಯಕತ್ವ ಹಂಚಿಕೆ ತಂತ್ರವನ್ನು ಅಳವಡಿಸಿವೆ. ಆದರೆ ಭಾರತ ಮತ್ತು ಕಿವೀಸ್ ತಂಡಗಳು ಇದಕ್ಕೆ ಅಪವಾದ.
ರೋಹಿತ್ ಯಶಸ್ವಿ ನಾಯಕ :
“ರೋಹಿತ್ ಶರ್ಮ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕನಾಗಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ದಾಖಲೆ 5 ಬಾರಿ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಹಾಗೆಯೇ ಕೊಹ್ಲಿ ನಾಯಕತ್ವದ ಸಾಧನೆಯೂ ಉತ್ತಮವಾಗಿಯೇ ಇದೆ. ಆದರೆ ಒತ್ತಡದ ಸಂದರ್ಭಗಳಲ್ಲಿ ಕೊಹ್ಲಿ ತೆಗೆದು ಕೊಳ್ಳುವ ಕೆಲವು ನಿರ್ಧಾರಗಳು ಟೀಕೆಗೊಳಗಾಗುತ್ತಿವೆ’ ಎಂದು ಮೋರೆ ಹೇಳಿದರು.
“ರೋಹಿತ್‌ಗೆ ಶೀಘ್ರವೇ ನಾಯ ಕತ್ವ ಲಭ್ಯವಾಗಲಿದೆ ಎಂಬುದು ನನ್ನ ಅನಿಸಿಕೆ. ಎಂ.ಎಸ್. ಧೋನಿ ಕಾಲದಲ್ಲಿ ಕೊಹ್ಲಿ ಕೂಡ ನಾಯಕತ್ವ ಹಂಚಿಕೊಂಡಿದ್ದರು’ ಎಂದು ಕಿರಣ್ ಮೋರೆ ಅಭಿಪ್ರಾಯಪಟ್ಟರು.