Advertisement

ಸೆಲ್ಫಿ ; 40 ಅಡಿ ಆಳಕ್ಕೆ ಬಿದ್ದು ಭಾರತದ ವಿದ್ಯಾರ್ಥಿ ಸಾವು

04:50 PM May 22, 2018 | Sharanya Alva |

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಸೆಲ್ಫಿ ದುರಂತಕ್ಕೆ ಭಾರತೀಯ ಮೂಲದ 20 ವರ್ಷ ವಯಸ್ಸಿನ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಪೂರ್ವ ಆಸ್ಟ್ರೇಲಿಯಾದ ಪ್ರವಾಸಿ ತಾಣ “ದ ಗೇಪ್‌’ ಎಂಬಲ್ಲಿಯ ವಿದ್ಯಾರ್ಥಿ ಅಂಕಿತ್‌ ಆತನ ಸ್ನೇಹಿತರ ಜೊತೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಕಾಲು ಜಾರಿ 40 ಅಡಿ ಆಳದಲ್ಲಿದ್ದ ಸಮುದ್ರಕ್ಕೆ ಬಿದ್ದು ಸಾವಿಗೀಡಾಗಿದ್ದಾನೆ.

Advertisement

ಹಲವಾರು ಗಂಟೆಗಳ ಶೋಧಕಾರ್ಯದ ಬಳಿಕ ಆತನ ಮೃತದೇಹ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಪೋಷಕರನ್ನು ಸಂಪರ್ಕಿಸುವ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next