Advertisement

ಕೇರಳ ಮೂಲದ ವಿದ್ಯಾರ್ಥಿಗೆ ಯುಎಇ ಗೋಲ್ಡನ್‌ ವೀಸಾ

07:25 PM May 30, 2021 | Team Udayavani |

ದುಬೈ: ಕೇರಳ ಮೂಲದ ತಸ್ನೀಮ್‌ ಅಸ್ಲಾಂ ಎಂಬ ವಿದ್ಯಾರ್ಥಿಗೆ ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ) ಸರ್ಕಾರ ನೀಡುವ ಗೋಲ್ಡನ್‌ ವೀಸಾ ಸಿಕ್ಕಿದೆ. ಅದರ ಅವಧಿ ಹತ್ತು ವರ್ಷಗಳು. ಹೀಗಾಗಿ, ಅವರಿಗೆ 2031ರ ವರೆಗೆ ಕೊಲ್ಲಿ ರಾಷ್ಟ್ರದಲ್ಲಿ ವಾಸ್ತವ್ಯ ಹೂಡಲು ಅವಕಾಶ ಸಿಕ್ಕಿದೆ.

Advertisement

ಅಲ್‌ ಖಾಸಿಮಿಯಾ ವಿವಿಯಲ್ಲಿ ತಸ್ನೀಮ್‌ ಅವರು ಇಸ್ಲಾಮಿಕ್‌ ಶರಿಯಾವನ್ನು ಅಧ್ಯಯನ ಮಾಡಿ, ತರಗತಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರು. 72 ರಾಷ್ಟ್ರಗಳ ವಿದ್ಯಾರ್ಥಿಗಳ ಪೈಕಿ ಕೇರಳ ಮೂಲದ ವಿದ್ಯಾರ್ಥಿಗೆ 4ರ ಪೈಕಿ 3.94 ಶ್ರೇಯಾಂಕ ಬಂದಿದೆ. ಈ ಬಗ್ಗೆ “ಖಲೀಜ್‌ ಟೈಮ್ಸ್‌’ಗೆ ಪ್ರತಿಕ್ರಿಯೆ ನೀಡಿದ ಅವರು “ಇದು ನನ್ನ ಜೀವನದ ಅಮೂಲ್ಯ ಕ್ಷಣ’ ಎಂದಿದ್ದಾರೆ.

ಇದನ್ನೂ ಓದಿ :ಮೇ 31ರಂದು ಉಡುಪಿ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಲಸಿಕೆ ಲಭ್ಯ

ಜಗತ್ತಿನ ಪ್ರಮುಖ ವ್ಯಕ್ತಿಗಳು, ಉದ್ಯಮಪತಿಗಳು, ರಾಜತಾಂತ್ರಿಕರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ವೈದ್ಯರಿಗೆ, ಸಂಶೋಧಕರಿಗೆ, ಕಲಾವಿದರಿಗೆ ಇಂಥ ಸವಲತ್ತು ನೀಡಲಾಗುತ್ತದೆ. ಅತ್ಯುತ್ತಮ ಸಾಧನೆ ಮಾಡಿದ ಶಾಲೆ ಮತ್ತು ವಿವಿ ವಿದ್ಯಾರ್ಥಿಗಳಿಗೆ ಐದು ವರ್ಷಗಳ ಅವಧಿಯ ವೀಸಾ ನೀಡಲಾಗುತ್ತದೆ. ಬಾಲಿವುಡ್‌ ನಟ ಸಂಜಯ ದತ್‌ಗೆ ಇದೇ ಸೌಲಭ್ಯ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next