Advertisement

ನಿರ್ಮಲಾ ಶೆರಾನ್‌ಗೆ ನಾಲ್ಕು ವರ್ಷ ನಿಷೇಧ

12:54 AM Oct 10, 2019 | Team Udayavani |

ಮೊನಾಕೊ: ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಭಾರತದ ಓಟಗಾರ್ತಿ ನಿರ್ಮಲಾ ಶೆರಾನ್‌ಗೆ 4 ವರ್ಷಗಳ ಕಾಲ ನಿಷೇಧ ವಿಧಿಸಲಾಗಿದ್ದು, 2017ರ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಅವರು ಜಯಿಸಿದ್ದ 2 ಪದಕಗಳನ್ನೂ ವಾಪಸ್‌ ಪಡೆಯಲಾಗಿದೆ.

Advertisement

2018ರ ಜೂನ್‌ನಲ್ಲಿ ಭಾರತದಲ್ಲಿ ನಡೆದ ಸ್ಪರ್ಧೆಯ ವೇಳೆ ನಡೆಸಿದ ಡೋಪಿಂಗ್‌ ಪರೀಕ್ಷೆಯಲ್ಲಿ ನಿರ್ಮಲಾ ನಿಷೇಧಿತ ಪದಾರ್ಥ ಸೇವಿಸಿರುವುದು ಸಾಬೀತಾಗಿದೆ. ಇದರಿಂದ ಅವರ ಜೈವಿಕ ವ್ಯವಸ್ಥೆಯಲ್ಲೂ ಅನಿಯಮಿತ ರಕ್ತದ ಪರಿಚಲನೆ ಇರುವುದು ಪತ್ತೆಯಾಗಿದೆ.

“ನಿರ್ಮಲಾ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿಚಾರಣೆಗೆ ವಿನಂತಿಸಿಲ್ಲ. ಅವರು ಪರಿಣಾಮವನ್ನು ಎದುರಿಸಲು ಸಿದ್ಧರಿದ್ದರು’ ಎಂದು ಆ್ಯತ್ಲೆಟಿಕ್‌ ಇಂಟೆಗ್ರಿಟಿ ಯೂನಿಟ್‌ (ಎಐಯು) ತಿಳಿಸಿದೆ.

24ರ ಹರೆಯದ ನಿರ್ಮಲಾ ವಿರುದ್ಧದ ನಿಷೇಧ ಅವಧಿ 2018ರ ಜೂ. 29ರಂದು ಆರಂಭವಾಗಲಿದೆ. ಆಗಸ್ಟ್‌ 2016ರಿಂದ ನವೆಂಬರ್‌ 2018ರ ವರೆಗಿನ ಅವರ ಫ‌ಲಿತಾಂಶವನ್ನು ಅನೂರ್ಜಿತಗೊಳಿಸಲಾಗಿದೆ.

ಚಿನ್ನದ ಪದಕಗಳಿಗೆ ಸಂಚಕಾರ
ನಿರ್ಮಲಾ ಭಾರತದಲ್ಲಿ ನಡೆದಿದ್ದ 2017ರ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಹಾಗೂ 4/400 ಮೀ. ರಿಲೇಯಲ್ಲಿ ಚಿನ್ನದ ಪದಕ ಜಯಿಸಿದ್ದರು. 2016ರಲ್ಲಿ ರಿಯೋ ರಿ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಈ ಎರಡೂ ವಿಭಾಗದಲ್ಲಿ ಭಾಗವಹಿಸಿ ಹೀಟ್ಸ್‌ನಲ್ಲೇ ಹೊರಬಿದ್ದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next