Advertisement

ರಾಜಕೀಯ ಮುತ್ಸದ್ಧಿಯ ನಿಧನಕ್ಕೆ ಕ್ರೀಡಾಲೋಕದ ಕಂಬನಿ

11:12 AM Aug 26, 2019 | Hari Prasad |

ನವದೆಹಲಿ: ಶನಿವಾರ ನಿಧನ ಹೊಂದಿದ ಕೇಂದ್ರದ ಮಾಜೀ ಸಚಿವ ಮತ್ತು ಜಿಜೆಪಿಯ ಟ್ರಬಲ್ ಶೂಟರ್ ಅರುಣ್ ಜೇಟ್ಲಿ ಅವರ ನಿಧನಕ್ಕೆ ಪಕ್ಷಾತೀತವಾಗಿ ರಾಜಕೀಯ ವಲಯ ಕಂಬನಿ ಮಿಡಿದಿದೆ. ಆದರೆ ವಿಶೇಷವೆಂದರೆ ಜೇಟ್ಲಿ ನಿಧನ ಕೇವಲ ರಾಜಕೀಯ ಕ್ಷೇತ್ರಕ್ಕೆ ಆದ ನಷ್ಟ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರಕ್ಕೂ ಅಪಾರ ನಷ್ಟವನ್ನುಂಟು ಮಾಡಿದೆ. ಕ್ರೀಡಾ ಲೋಕದ ಹಲವಾರು ಧಿಗ್ಗಜರು ಜೇಟ್ಲಿ ಅವರ ನಿಧನಕ್ಕೆ ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸುತ್ತಿರುವ ಸಂತಾಪ ಸಂದೇಶಗಳೇ ಇದಕ್ಕೆ ಸಾಕ್ಷಿ.

Advertisement

ಜೇಟ್ಲಿ ಅವರು ಓರ್ವ ಅತ್ಯುತ್ತಮ ಕ್ರೀಡಾ ಪ್ರೇಮಿಯಾಗಿದ್ದರು. ಅವರು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಹಲವಾರು ಕ್ರೀಡಾಪಟುಗಳು ಜೇಟ್ಲಿ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು.

ಅರುಣ್ ಜೇಟ್ಲಿ ಅವರ ನಿಧನಕ್ಕೆ ಕ್ರೀಡಾ ಲೋಕ ಹೇಗೆ ಕಂಬನಿ ಮಿಡಿದಿದೆ ಎಂಬುದಕ್ಕೆ ಸಾಕ್ಷಿಯಾಗಿ ಕೆಲವೊಂದು ಸಂತಾಪ ಟ್ವೀಟ್ ಗಳು ಇಲ್ಲಿವೆ:

ಕ್ರೀಡೆಯ ಬಹುದೊಡ್ಡ ಬೆಂಬಲಿಗರಾಗಿದ್ದ ಅರುಣ್ ಜೀ ಅವರನ್ನು ನಾವಿನ್ನು ಶಾಶ್ವತವಾಗಿ ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಎಫ್ 1 ರೇಸರ್ ನರೈನ್ ಕಾರ್ತಿಕೇಯನ್ ಅವರು ತಮ್ಮ ಸಂತಾಪ ಸಂದೇಶ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.


ಜೇಟ್ಲಿ ಅವರು ಡಿಡಿಸಿಎ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನನ್ನನ್ನೂ ಸೇರಿಸಿ ದೆಹಲಿ ಮೂಲದ ಹಲವಾರು ಆಟಗಾರರಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಿತ್ತು. ಯಾವುದೇ ಸಮಸ್ಯೆಗಳನ್ನು ಅವರು ಸಲೀಸಾಗಿ ನಿವಾರಿಸುತ್ತಿದ್ದರು. ನನಗೆ ವೈಯಕ್ತಿಕವಾಗಿ ಅವರೊಂದಿ ಉತ್ತಮ ಬಾಂಧವ್ಯ ಇತ್ತು. ಜೇಟ್ಲಿ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವೀರೂ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

Advertisement

ತಂದೆ ಮಾತು ಕಲಿಸುತ್ತಾರೆ ಆದರೆ ತಂದೆ ಸಮಾನರು ನಿಮಗೆ ಮಾತನಾಡಲು ಕಲಿಸುತ್ತಾರೆ, ತಂದೆ ನಡೆಯಲು ಕಲಿಸಿದರೆ ತಂದೆ ಸಮಾನರು ನಿಮಗೆ ಮುನ್ನಡೆಯಲು ಕಲಿಸುತ್ತಾರೆ. ಒಬ್ಬ ತಂದೆ ನಿಮಗೆ ಹೆಸರಿಟ್ಟರೆ ತಂದೆ ಸಮಾನರು ನಿಮಗೊಂದು ಗುರುತನ್ನು ಕೊಡುತ್ತಾರೆ. ಅರುಣ್ ಜೇಟ್ಲಿ ಅವರು ನನಗೆ ತಂದೆ ಸಮಾನರಾಗಿದ್ದರು ಎಂದು ಮಾಜೀ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಕಂಬನಿ ಮಿಡಿದಿದ್ದಾರೆ.

ಟೀಂ ಇಂಡಿಯಾದ ಮಾಜೀ ಕ್ರಿಕೆಟಿಗ ಹಾಗೂ ಕಲಾತ್ಮಕ ಬ್ಯಾಟ್ಸ್ ಮನ್ ವಿವಿ ಎಸ್ ಲಕ್ಷಣ್ ಅವರು ಮಾಡಿರುವ ಟ್ವೀಟ್:

ತನ್ನ ವಿಶಿಷ್ಟ ಕಾರ್ಯವೈಖರಿಯ ಮೂಲಕ ಹಲವಾರು ಯಶಸ್ಸಿನ ಕಿರೀಟಗಳನ್ನು ಏಕಕಾಲದಲ್ಲಿ ತೊಟ್ಟುಕೊಂಡಿದ್ದ ಅರುಣ್ ಜೇಟ್ಲಿ ಅವರ ನಿಧನಕ್ಕೆ ನನ್ನ ಗಾಢ ಸಂತಾಪಗಳು ಎಂದು ಲಿಟಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.


ಮಾಜೀ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಲೆ ಅವರ ಟ್ವೀಟ್

ಅರುಣ್ ಜೇಟ್ಲಿ ಅವರ ನಿಧನದ ಸುದ್ದಿ ಕೇಳಿ ನನಗೆ ನಿಜವಾಗಿಯೂ ದುಃಖವಾಗುತ್ತಿದೆ. ಪರೋಪಕಾರ ಗುಣವನ್ನು ಹೊಂದಿದ್ದ ಜೇಟ್ಲಿ ಅವರದ್ದು ಉನ್ನತ ವ್ಯಕ್ತಿತ್ವ ಅಗಿತ್ತು. 2006ರಲ್ಲಿ ನನ್ನ ತಂದೆ ನಿಧನ ಹೊಂದಿದ್ದ ಸಂದರ್ಭದಲ್ಲಿ ಅವರು ನಮ್ಮ ಮನೆಗೆ ಬಂದು ನಮಗೆಲ್ಲಾ ಸಾಂತ್ವನ ಹೇಳಿದ್ದರು. ಎಂದು ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ವಿರಾಟ್ ಅವರು ತನ್ನ ತಂಡದೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವುದರಿಂದ ಜೇಟ್ಲಿ ಅವರ ಅಂತಿಮ ದರ್ಶನ ಪಡೆಯಲು ವಿರಾಟ್ ಗೆ ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next