Advertisement
ನವದೆಹಲಿ ಮೂಲದ ಅಹಿಂಸಾ ವಿಶ್ವ ಭಾರತಿ ಫೌಂಡೇಶನ್ ಆಯೋಜಿಸಿದ್ದ ವಿಶ್ವ ಶಾಂತಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಜೈನ ಮುಖಂಡ ಆಚಾರ್ಯ ಲೋಕೇಶ್ ಮುನಿ, ಭಾರತದಲ್ಲಿ ಇತ್ತೀಚೆಗೆ ಸ್ಥಾಪಿಸಲಾದ ವಿಶ್ವ ಶಾಂತಿ ಕೇಂದ್ರವು ಈ 1,000 ಶಾಂತಿ ರಾಯಭಾರಿಗಳಿಗೆ ತರಬೇತಿ ನೀಡಲಿದೆ ಎಂದು ಹೇಳಿದರು.
Related Articles
Advertisement
ಭಾರತದ ಆಧ್ಯಾತ್ಮಿಕ ನಾಯಕ ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಭಾರತದ ಮೊದಲ ವಿಶ್ವ ಶಾಂತಿ ಕೇಂದ್ರವು ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಲು ಕೊಡುಗೆ ನೀಡುತ್ತದೆ ಎಂದು ಹೇಳಿದರು.
“ಪ್ರತಿಯೊಬ್ಬರೂ ಶಾಂತಿಗಾಗಿ ನಿಲ್ಲುವ ಉದ್ದೇಶವನ್ನು ಹೊಂದಿದ್ದರೆ ಮತ್ತು ಅವರ ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಿದರೆ, ನಾವು ವಿಶ್ವ ಶಾಂತಿಯನ್ನು ರಿಯಾಲಿಟಿ ಆಗಿ ಪರಿವರ್ತಿಸಬಹುದು. ವೈಯಕ್ತಿಕ ಶಾಂತಿ ಇಲ್ಲದೆ ಜಾಗತಿಕ ಶಾಂತಿ ಸಾಧ್ಯವಿಲ್ಲ,” ಎಂದು ಹೇಳಿದರು.
ಅಹಿಂಸಾ ವಿಶ್ವ ಭಾರತಿ ಫೌಂಡೇಶನ್ ಸ್ಥಾಪಿಸುತ್ತಿರುವ ವಿಶ್ವ ಶಾಂತಿ ಕೇಂದ್ರವು ವಿಶ್ವಶಾಂತಿಗಾಗಿ ಸಮರ್ಪಿತವಾಗಲಿದೆ ಮತ್ತು ಕಾಲಕಾಲಕ್ಕೆ ಜಗತ್ತಿಗೆ ಮಾರ್ಗದರ್ಶನ ನೀಡಲಿದೆ ಎಂದು ರವಿಶಂಕರ್ ಲಾಸ್ ಏಂಜಲೀಸ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಚಲನಚಿತ್ರ ನಟ ವಿವೇಕ್ ಒಬೆರಾಯ್ ಸಮ್ಮೇಳನವನ್ನು ನಡೆಸಿಕೊಟ್ಟರು, ಇತರರ ಜೊತೆಗೆ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಕೂಡ ಭಾಗವಹಿಸಿದ್ದರು.