Advertisement

ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯನ್ನು ಕಾಡಿದ್ದನಂತೆ ಈ ಬ್ಯಾಟ್ಸ್ ಮನ್! ಯಾರು ಆ ಲೆಫ್ಟೀ?

08:32 PM Jul 26, 2020 | Hari Prasad |

ಹೊಸದಿಲ್ಲಿ: ಬೌಲರ್‌ ಓರ್ವ ಎಷ್ಟೇ ಘಾತಕನಾಗಿದ್ದರೂ, ಆತ ವಿಕೆಟ್‌ ಬೇಟೆಯಲ್ಲಿ ಎಷ್ಟೇ ನಿಷ್ಣಾತನಾದರೂ ಅವರಿಗೆ ಸವಾಲೊಡ್ಡಬಲ್ಲ ಬ್ಯಾಟ್ಸ್‌ಮನ್‌ ಓರ್ವ ಇದ್ದೇ ಇರುತ್ತಾನೆ. ಟೆಸ್ಟ್‌ ವಿಕೆಟ್‌ ಬೇಟೆಯಲ್ಲಿ ಭಾರತೀಯ ದಾಖಲೆ ಬರೆದಿರುವ ಸ್ಪಿನ್‌ ಮಾಂತ್ರಿಕ ಅನಿಲ್‌ ಕುಂಬ್ಳೆ ಕೂಡ ಇದಕ್ಕೆ ಹೊರತಲ್ಲ.

Advertisement

ಹಾಗಾದರೆ ಕುಂಬ್ಳೆ ಎಸೆತಗಳಿಗೆ ಸವಾಲೊಡ್ಡಿದ ಆಟಗಾರ ಯಾರು? ಕುಂಬ್ಳೆ ಯಾವ ಬ್ಯಾಟ್ಸ್‌ಮನ್‌ಗೆ ಬೌಲಿಂಗ್‌ ಮಾಡುವುದು ಅತ್ಯಂತ ಕಠಿನ ಎಂದು ಭಾವಿಸಿದ್ದರು?

ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಪೋಮಿ ಎಂಬಗ್ವ ನಡೆಸಿಕೊಟ್ಟ ಇನ್‌ಸ್ಟಾಗ್ರಾಮ್‌ ಲೈವ್‌ ಕಾರ್ಯಕ್ರಮದಲ್ಲಿ ಅನಿಲ್‌ ಕುಂಬ್ಳೆಗೆ ಇಂಥ ಪ್ರಶ್ನೆಗಳು ಎದುರಾದವು.

ಆದರೆ ನಮ್ಮ ಕರ್ನಾಟಕದ ಹೆಮ್ಮೆಯ ಬೌಲರ್‌ ಜಂಬೋ ಈ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದರು.

ಎಲ್ಲರೂ ನಮ್ಮಲ್ಲೇ ಇದ್ದರು!
‘ಇಂಥ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅದೃಷ್ಟವಶಾತ್‌ ನನ್ನ ಕಾಲದ ಅತ್ಯುತ್ತಮ ದರ್ಜೆಯ ಬ್ಯಾಟ್ಸ್‌ಮನ್‌ಗಳನೇಕರು ಭಾರತ ತಂಡದಲ್ಲೇ ಇದ್ದರು.ತೆಂಡುಲ್ಕರ್‌, ದ್ರಾವಿಡ್‌, ಲಕ್ಷ್ಮಣ್‌, ಗಂಗೂಲಿ, ಸೆಹವಾಗ್‌…ಹೀಗೆ. ಆದರೆ, ಇವರೆಲ್ಲರಿಗೂ ನಾನು ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುತ್ತಿದ್ದೆ. ಆದರೆ ಪಂದ್ಯದಲ್ಲಿ ಇವರಿಗೆಲ್ಲ ಬೌಲಿಂಗ್‌ ಮಾಡಬೇಕಲ್ಲ ಎಂಬ ಚಿಂತೆ ನನಗಿರುತ್ತಿರಲಿಲ್ಲ…’ ಎಂದು ಕುಂಬ್ಳೆ ಹೇಳಿದರು.

Advertisement

ಆದರೆ ಅವನೊಬ್ಬನಿದ್ದ ‘ಲಾರಾ’
ಈ ಸಂದರ್ಭದಲ್ಲಿ ಅನಿಲ್‌ ಕುಂಬ್ಳೆ ನಿರ್ದಿಷ್ಟ ಬ್ಯಾಟ್ಸ್‌ಮನ್‌ ಓರ್ವನ ಹೆಸರು ಹೇಳಲು ಮರೆಯಲಿಲ್ಲ.ಆ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವೆಸ್ಟ್‌ ಇಂಡೀಸಿನ ಶ್ರೇಷ್ಠ ಬ್ಯಾಟ್ಸ್ ಮನ್ ಬ್ರಿಯಾನ್‌ ಲಾರಾ!

‘ನನ್ನ ಕಾಲದಲ್ಲೂ ಬೌಲಿಂಗಿಗೆ ಸವಾಲಾಗಬಲ್ಲ ಬಹಳಷ್ಟು ಬ್ಯಾಟ್ಸ್‌ಮನ್‌ಗಳಿದ್ದರು. ಇವರಲ್ಲಿ ಬ್ರಿಯಾನ್‌ ಲಾರಾ ಕಠಿನ ಎದುರಾಳಿಯಾಗಿದ್ದರು. ಯಾಕೆಂದರೆ, ಪ್ರತಿಯೊಂದು ಎಸೆತಕ್ಕೆ ನಾಲ್ಕು ವಿಭಿನ್ನ ರೀತಿಯ ಹೊಡೆತಗಳನ್ನು ಬಾರಿಸುವ ತಾಕತ್ತು ಅವರಲ್ಲಿ ಇರುತ್ತಿತ್ತು. ಬೌಲರ್‌ಗಳ ದಿಕ್ಕು ತಪ್ಪಿಸುವಲ್ಲಿ ಲಾರಾಗಿಂತ ಮಿಗಿಲಾದ ಬ್ಯಾಟ್ಸ್‌ಮನ್‌ ಮತ್ತೂಬ್ಬ ಇಲ್ಲ…’ ಎಂದು ಅನಿಲ್‌ ಕುಂಬ್ಳೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next