Advertisement
1. ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಮೂಲತಃ ಪಂಜಾಬ್‌ನವರು.2. ಐದು ವರ್ಷದ ಹುಡುಗನಾಗಿದ್ದಾಗಲೇ ರಾಕೇಶ್, ಜೆಟ್ ವಿಮಾನದಂತೆ ಹಾರುವ ಆಟ ಆಡುತ್ತಿದ್ದರು.
3. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಉತ್ತೀರ್ಣರಾದ ಅವರು, ತಮ್ಮ ಕನಸಿನಂತೆಯೇ ಭಾರತೀಯ ವಾಯುಸೇನೆಯಲ್ಲಿ ಟೆಸ್ಟ್ ಪೈಲಟ್ ಆದರು.
4. 1971ರ ಪಾಕಿಸ್ತಾನದ ವಿರುದ್ಧದ ಯುದ್ಧ ಕಾರ್ಯಾಚರಣೆಯಲ್ಲಿ 21 ಯುದ್ಧ ವಿಮಾನಗಳನ್ನು ಹಾರಿಸಿದ್ದರು.
5. 1982ರಲ್ಲಿ ಇಸ್ರೋ ಮತ್ತು ಸೋವಿಯತ್ ಇಂಟರ್‌ಕಾಸ್ಮೋಸ್‌ದ ಜಂಟಿ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಗಗನಯಾತ್ರಿಯಾಗಿ ಆಯ್ಕೆಯಾದರು.
6. 1984ರ ಏಪ್ರಿಲ್ 2ರಂದು, ಯೂರಿ ಮಾಲಿಶೇವ್ ಹಾಗೂ ಗೆನ್ನಾಡಿ ಸ್ಟ್ರೆಕಲೋವ್ ಜೊತೆಗೆ ಸೋಯುಜ್ ಟಿ-11 ಬಾಹ್ಯಾಕಾಶ ನೌಕೆಯಲ್ಲಿ ಅವರು ಅಂತರಿಕ್ಷ ಪ್ರಯಾಣ ಕೈಗೊಂಡರು.
7. 7 ದಿನ, 21 ನಿಮಿಷ 40 ನಿಮಿಷಗಳ ಕಾಲ ರಾಕೇಶ್ ಶರ್ಮಾ ಮತ್ತು ತಂಡ, ಬಾಹ್ಯಾಕಾಶದಲ್ಲಿತ್ತು
8. ರಾಕೇಶ್ ಶರ್ಮಾ ತಮ್ಮ ಜೊತೆಗೆ ಬಾಹ್ಯಾಕಾಶಕ್ಕೆ ಒಯ್ದಿದ್ದು ಹಲ್ವ, ಪಲಾವ್ ಮತ್ತು ಆಲೂ ಚೋಲೆಯನ್ನು. ಅದರ ಸವಿಯನ್ನು ರಷ್ಯಾದ ಸಹಯಾತ್ರಿಗಳು ಬಹುವಾಗಿ ಮೆಚ್ಚಿಕೊಂಡರಂತೆ.
9. ಅಂತರಿಕ್ಷದಲ್ಲಿ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಆಕಾಶನೌಕೆಯಲ್ಲಿಯೇ “ಶೂನ್ಯ ಗುರುತ್ವ ಯೋಗ’ ಅಭ್ಯಾಸ ಮಾಡಿದ್ದರು ರಾಕೇಶ್ ಶರ್ಮಾ.
10. ಬಾಹ್ಯಾಕಾಶದಿಂದ ನೇರವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜೊತೆ ಫೋನ್‌ನಲ್ಲಿ ಮಾತಾಡುವಾಗ ಇಂದಿರಾಗಾಂಧಿ “ಅಲ್ಲಿಂದ ಭಾರತ ಹೇಗೆ ಕಾಣುತ್ತಿದೆ’ ಎಂದು ಕೇಳಿದ್ದರು. ಆಗ ಶರ್ಮಾ ನೀಡಿದ ಉತ್ತರ- “ಸಾರೇ ಜಹಾನ್ ಸೆ ಅಚ್ಛಾ’ (ಇಡೀ ಪ್ರಪಂಚವೇ ಇಲ್ಲಿಂದ ಚೆನ್ನಾಗಿ ಕಾಣುತ್ತಿದೆ)