Advertisement

ಭಾರತೀಯ ಸೈನಿಕರು ತಾಯಿಯಿದ್ದಂತೆ: ಸೆಹವಾಗ್‌

03:45 AM Jul 01, 2017 | |

ಹೊಸದಿಲ್ಲಿ: ಒಂದೇ ತಿಂಗಳಲ್ಲಿ ಪಾಕಿಸ್ಥಾನ ಸೈನಿಕರು 23ನೇ ಬಾರಿ ಕದನ ವಿರಾಮ ಉಲ್ಲಂ ಸಿದ್ದು ದೊಡ್ಡ ಸುದ್ದಿಯಾಗಿತ್ತು. ಭಾರತೀಯ ಯೋಧರ ಕುರಿತು ಪದೇ ಪದೇ ಗೌರವದಿಂದ ಪ್ರತಿಕ್ರಿಯಿಸುವ ವೀರೇಂದ್ರ ಸೆಹವಾಗ್‌ ಈ ಬಗ್ಗೆಯೂ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಯೋಧರನ್ನು ತಾಯಿಗೆ ಹೋಲಿಸಿದ್ದಾರೆ.

Advertisement

“ನಮ್ಮ ಸೈನಿಕರು ತಾಯಿಯಿದ್ದಂತೆ, ನಿಸ್ವಾರ್ಥವಾಗಿ ಸೇವೆ ಮಾಡುತ್ತಾರೆ, ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ. ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಸೈನ್ಯವನ್ನು ಗೌರವಿಸೋಣ. ಜೈ ಹಿಂದ್‌’ ಎಂದು ಸೆಹವಾಗ್‌ ಟ್ವೀಟ್‌ ಮಾಡಿದ್ದಾರೆ. ಈ ಹಿಂದೆ ಟ್ವೀಟ್‌ ಮಾಡಿದ್ದ ವೀರೂ, ಯೋಧರನ್ನು ಯಾವಾಗ, ಎಲ್ಲೇ ಕಂಡರೂ ಒಮ್ಮೆ ಸೆಲ್ಯೂಟ್‌ ಹೊಡೆಯಿರಿ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next