Advertisement
ಪ್ರಮುಖ ಭೂಮಿಕೆ: ಭಾರತ ಮತ್ತು ಪಾಕಿಸ್ಥಾನ ನಡುವಿನ ಬಿಗುವಿನ ವಾತಾವರಣ ತಗ್ಗಿಸುವಲ್ಲಿ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಪ್ರಮುಖ ಪಾತ್ರ ವಹಿಸಿದೆ ಎಂದು ಭಾರತದಲ್ಲಿನ ಯುಎಇ ರಾಯಭಾರಿ ಅಹ್ಮದ್ ಅಲ್ ಬನ್ನಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದೊರೆ ಮೊಹಮ್ಮದ್ ಬಿನ್ ಝಯೇದ್ ಅಲ್-ನಹ್ಯಾನ್‌ರ ಫೋನ್ ಸಂಭಾಷಣೆ ಪ್ರಸ್ತಾಪಿಸಿ ಅವರು ಈ ಅಂಶ ಉಲ್ಲೇಖೀಸಿದ್ದಾರೆ.
2008ರಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರರು ಮುಂಬಯಿನಲ್ಲಿ ನಡೆಸಿದ್ದ ದಾಳಿ ಅತ್ಯಂತ ಹೇಯ ಘಟನೆ ಎಂದು ಚೀನ ಬಣ್ಣಿಸಿದೆ. ಕ್ಸಿಯಾನ್‌ಜಿಯಾಂಗ್ ಪ್ರಾಂತ್ಯದಲ್ಲಿ ಉಗ್ರರನ್ನು ಮಟ್ಟ ಹಾಕಿದ ಬಗ್ಗೆ ಹೊರಡಿಸಲಾದ ಶ್ವೇತಪತ್ರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. “ದ ಫೈಟ್ ಎಗೈನೆಸ್ಟ್ ಟೆರರಿಸಂ ಆ್ಯಂಡ್ ಎಕ್ಸ್‌ಟ್ರೀಮಿಸಂ ಆ್ಯಂಡ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಇನ್ ಕ್ಸಿನ್‌ಜಿಯಾಂಗ್’ ಎಂಬ ಶಿರೋನಾಮೆಯ ಶ್ವೇತಪತ್ರದಲ್ಲಿ ಮೊದಲ ಬಾರಿಗೆ ಪಾಕಿಸ್ಥಾನ ಪ್ರೇರಿತ ಲಷ್ಕರ್-ಎ-ತೊಯ್ಬಾ ಸಂಘಟನೆ ನಡೆಸಿದ ಕುಕೃತ್ಯ ಖಂಡಿಸಲಾಗಿದೆ. ಪಾಕ್ ವಿದೇಶಾಂಗ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ.