Advertisement

ಕ್ಯಾಲಿಫೋರ್ನಿಯಾ: ನದಿಯಲ್ಲಿ ಸಿಲುಕಿದ್ದ 3 ಮಕ್ಕಳನ್ನು ರಕ್ಷಿಸಿ ನೀರುಪಾಲಾದ ಭಾರತೀಯ

12:30 PM Aug 09, 2020 | sudhir |

ಕ್ಯಾಲಿಫೋರ್ನಿಯಾ: ನದಿಯಲ್ಲಿ ಸಿಲುಕಿದ್ದ ಮೂವರು ಮಕ್ಕಳನ್ನು ರಕ್ಷಿಸಿರುವ ಭಾರತೀಯ ಮೂಲದ ಸಿಖ್‌ ವ್ಯಕ್ತಿ, ಕಡೆಗೆ ನೀರಿ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Advertisement

ಕ್ಯಾಲಿ­ಫೋರ್ನಿ­ಯಾದ ಕಿಂಗ್ಸ್‌ ನದಿ ತೀರದಲ್ಲಿ ಆಟವಾಡುತ್ತಿದ್ದ 3 ಮಕ್ಕಳು ನೀರಿನ ಸೆಳೆತಕ್ಕೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸು­ತ್ತಿದ್ದರು. ದೂರದಿಂದಲೇ ಇದನ್ನು ನೋಡಿದ ಮಂಜೀತ್‌ ಸಿಂಗ್‌ (28) ನದಿಗೆ ಜಿಗಿದಿ­ದ್ದಾರೆ. ದೂರಕ್ಕೆ ತೇಲಿಹೋಗಿದ್ದ ಇಬ್ಬರು ಮಕ್ಕ­ಳನ್ನು ದಡಕ್ಕೆ ಎಳೆದು ತಂದಿದ್ದಾರೆ. ಮತ್ತೂಂದು ಮಗುವನ್ನು ದಡಕ್ಕೆ ತಳ್ಳಿದ್ದಾರೆ. ಆದರೆ, ಮಂಜೀತ್‌ ಸಿಂಗ್‌ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜೀತ್‌ ಸಿಂಗ್‌ 2 ವರ್ಷಗಳ ಹಿಂದೆ ಭಾರತದಿಂದ ಅಮೆರಿಕಕ್ಕೆ ಬಂದಿದ್ದರು. 8 ವರ್ಷದ ಬಾಲಕಿ, 10 ವರ್ಷದ ಬಾಲಕ ಸುರಕ್ಷಿತ ವಾಗಿದ್ದಾರೆ. 8 ವರ್ಷ ಬಾಲಕಿಯೊಬ್ಬಳನ್ನು ಆಸ್ಪತ್ರೆಗೆ ದಾಖಲಿಸ­ಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next