Advertisement

ಇನ್ನು ಒಂದೇ ತಿಂಗಳಲ್ಲಿ ಭಾರತಕ್ಕೆ ಬರಲಿದೆ ರಫೇಲ್‌ ಯುದ್ಧ ವಿಮಾನ

09:00 AM Aug 22, 2019 | mahesh |

ಹೊಸದಿಲ್ಲಿ: ದೇಶದ ಬಹುನಿರೀಕ್ಷಿತ ಅತ್ಯಾಧುನಿಕ ಯುದ್ಧ ವಿಮಾನ, ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಷನ್‌ ನಿರ್ಮಾಣದ ರಫೇಲ್‌, ಪ್ರಥಮವಾಗಿ ಸೆ.20ರಂದು ಹಸ್ತಾಂತರವಾಗಲಿದೆ.

Advertisement

ಇದಕ್ಕಾಗಿ ಭಾರತದಿಂದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಾಯುಪಡೆ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಬಿ.ಎಸ್‌.ಧನೋವಾ ಅವರು ಫ್ರಾನ್ಸ್‌ಗೆ ತೆರಳಲಿದ್ದಾರೆ. ಒಪ್ಪಂದ ಪ್ರಕಾರ ಮೊದಲ ವಿಮಾನ ಹಸ್ತಾಂತರವಾದ ಬಳಿಕ ಮುಂದಿನ ವರ್ಷ ಮೇ ತಿಂಗಳಿಂದ ಹಂತ ಹಂತವಾಗಿ 36 ಯುದ್ಧ ವಿಮಾನಗಳು ಭಾರತಕ್ಕೆ ಸಿಗಲಿವೆ. ಸಚಿವ ರಾಜನಾಥ್‌ ಮತ್ತು ಧನೋವಾ ಅವರಿಗೆ ಫ್ರಾನ್ಸ್‌ನಲ್ಲಿರುವ ರಫೇಲ್‌ ತಯಾರಿಕಾ ಘಟಕ ಬೋರ್ಡೆಕ್ಸ್‌ ಎಂಬಲ್ಲಿ ವಿಮಾನ ಹಸ್ತಾಂತರಿಸಲಾಗುವುದು.

ಇನ್ನು ರಫೇಲ್‌ ಯುದ್ಧ ವಿಮಾನ ಚಾಲನೆ ಕುರಿತಾಗಿ ವಾಯುಪಡೆಯ 24 ಪೈಲೆಟ್‌ಗಳಿಗೆ ಮೂರು ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ಮೇ ವರೆಗೆ ಈ ತರಬೇತಿ ನಡೆಯಲಿದೆ. ರಫೇಲ್‌ ಸ್ಕ್ವಾಡ್ರನ್‌ ಅನ್ನು ಅಂಬಾಲಾ, ಹರಿಯಾಣಾ, ಹಶಿಮರಾ, ಬಂಗಾಲಗಳಲ್ಲಿ ನಿಯೋಜಿಸಲಾಗುತ್ತದೆ. 2016ರಲ್ಲಿ ಭಾರತ ಫ್ರಾನ್ಸ್‌ ಜತೆ ರಫೇಲ್‌ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next