Advertisement

3 ವರ್ಷಗಳಲ್ಲೇ ದೇಶಕ್ಕೆ ಬರಲಿದೆ “ವಾಲುವ ರೈಲು’!

11:49 PM Nov 25, 2022 | Team Udayavani |

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಮೂರೇ ವರ್ಷಗಳಲ್ಲಿ ಭಾರತಕ್ಕೆ ಮೊದಲ “ವಾಲುವ ರೈಲು'(ಟಿಲ್ಟಿಂಗ್‌ ಟ್ರೈನ್‌) ಎಂಟ್ರಿಯಾಗಲಿದೆ!

Advertisement

2025-26ರ ವೇಳೆಗೆ ವಾಲುವ ತಂತ್ರಜ್ಞಾನವುಳ್ಳ 100 ವಂದೇ ಭಾರತ್‌ ರೈಲುಗಳನ್ನು ತಯಾರಿಸಲು ಚಿಂತನೆ ನಡೆಸಲಾಗಿದೆ. 2025ರಲ್ಲಿ ತಯಾರಾಗಲಿರುವ 400 ವಂದೇ ಭಾರತ್‌ ರೈಲುಗಳ ಪೈಕಿ 100ರಲ್ಲಿ ಈ ತಂತ್ರಜ್ಞಾನ ವನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ವಾಲುವ ರೈಲು?
ತಿರುವು ಇರುವಂಥ ರಸ್ತೆಗಳಲ್ಲಿ ಬೈಕುಗಳು ಹೇಗೆ ವಾಲಿಕೊಂಡು ಮುಂದೆ ಸಾಗುತ್ತದೆಯೋ, ಅದೇ ಮಾದರಿಯಲ್ಲಿ ರೈಲುಗಳು ಕೂಡ ಅಧಿಕ ವೇಗದಲ್ಲಿ ಸಂಚರಿಸುವಾಗಲೂ ಬಾಗುವಂಥ ತಂತ್ರಜ್ಞಾನವಿದು. ಸಾಮಾನ್ಯ ಬ್ರಾಡ್‌ಗೆàಜ್‌ ಹಳಿಗಳಲ್ಲೂ ಈ ತಂತ್ರಜ್ಞಾನವು ಕೆಲಸ ಮಾಡಲಿದೆ.

ಎಲ್ಲೆಲ್ಲಿವೆ?
ವಾಲುವ ರೈಲುಗಳು ಈಗಾಗಲೇ ಇಟಲಿ, ಪೋರ್ಚುಗಲ್‌, ಯುಕೆ, ಚೀನಾ, ಜರ್ಮನಿ ಸೇರಿದಂತೆ 11 ದೇಶಗಳಲ್ಲಿವೆ.

ವಂದೇ ಭಾರತ್‌ ರಫ್ತು:
ಈ ಮಧ್ಯೆ, 2025-26ರ ವೇಳೆಗೆ ಯುರೋಪ್‌, ದಕ್ಷಿಣ ಅಮೆರಿಕ, ಪೂರ್ವ ಏಷ್ಯಾದ ಮಾರುಕಟ್ಟೆಗಳಿಗೆ ವಂದೇ ಭಾರತ್‌ ರೈಲುಗಳನ್ನು ಭಾರತ ರಫ್ತು ಮಾಡಲು ಚಿಂತನೆ ನಡೆಸಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next