Advertisement

ರೈಲಲ್ಲಿ ಲಗೇಜ್‌ ಮಿತಿ ಮೀರಿದರೆ ಭಾರೀ ದಂಡ

07:45 AM Jun 06, 2018 | Team Udayavani |

ಹೊಸದಿಲ್ಲಿ: ರೈಲು ಪ್ರಯಾಣಿಕರೇ ಸ್ವಲ್ಪ ಗಮನಕೊಡಿ. ವಿಮಾನದಲ್ಲಿ ಇರುವಂತೆಯೇ ಇನ್ನು ಮುಂದೆ ರೈಲು ಪ್ರಯಾಣದ ವೇಳೆಯೂ ಮಿತಿಗಿಂತ ಹೆಚ್ಚುವರಿ ಲಗೇಜ್‌ ಕೊಂಡೊಯ್ಯುವಂತಿಲ್ಲ. ಸುಮಾರು 30 ವರ್ಷಗಳ ಹಿಂದಿನ ಬ್ಯಾಗೇಜ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ರೈಲ್ವೇ ಇಲಾಖೆ ಈಗ ಮುಂದಾಗಿದೆ. ನಿಗದಿತ ಮಿತಿಗಿಂತ ಹೆಚ್ಚುವರಿ ಲಗೇಜ್‌ ಹೊಂದಿದ್ದರೆ ಅಂಥವರಿಗೆ ನಿಗದಿತ ಮೊತ್ತದ 6 ಪಟ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ಸ್ಲೀಪರ್‌ ದರ್ಜೆಯಲ್ಲಿ ಒಬ್ಬ ಪ್ರಯಾಣಿಕ ಗರಿಷ್ಠ 40 ಕೆ.ಜಿ.ಯಷ್ಟು ಲಗೇಜ್‌ ಉಚಿತವಾಗಿ ಕೊಂಡೊಯ್ಯಬಹುದಾಗಿದ್ದು, ಶುಲ್ಕ ಸಹಿತ ಗರಿಷ್ಠ 80 ಕೆ.ಜಿ.ಗಷ್ಟೇ ಅವಕಾಶವಿರಲಿದೆ. ಈಗಾಗಲೇ ಈ ನಿಯಮ ಚಾಲ್ತಿಯಲ್ಲಿದ್ದರೂ ಅದನ್ನು ಯಾರೂ ಪಾಲಿಸುತ್ತಿರಲಿಲ್ಲ. ಇನ್ನು ಮುಂದೆ ಎಲ್ಲರೂ ಪಾಲಿಸುವಂತೆ ಮಾಡುವುದೇ ಇದರ ಉದ್ದೇಶ ಎಂದು ರೈಲ್ವೇ ಮಂಡಳಿ ಮಾಹಿತಿ ಮತ್ತು ಪ್ರಚಾರ ವಿಭಾಗದ ನಿರ್ದೇಶಕ ವೇದ್‌ ಪ್ರಕಾಶ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next