Advertisement

ರೈಲ್ವೆ ಬೋಗಿಗಳಿನ್ನು ವಾರ್ಡ್‌, ಚಿಕಿತ್ಸಾ ಕೇಂದ್ರಗಳು!

09:43 AM Mar 28, 2020 | Hari Prasad |

ರೈಲ್ವೆ ಇಲಾಖೆಯ ಬೋಗಿಗಳ ತಯಾರಿಕಾ ಘಟಕಗಳಲ್ಲಿ ಕೆಲವು ಬೋಗಿಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸುವ ಕೆಲಸಕ್ಕೆ ನಡೆಯಲಿದೆ. ಇಂಥ ಪರಿವರ್ತಿತ ಬೋಗಿಗಳನ್ನು ಆಸ್ಪತ್ರೆಯ ಸೌಕರ್ಯಗಳಿಂದ ವಂಚಿತವಾಗಿರುವ, ಹಳ್ಳಿಗಳ ಕಡೆಗೆ ರವಾನಿಸಿ ಅಲ್ಲಿನ ಕೊರೊನಾ ಪೀಡಿತರಿಗೆ ಸೂಕ್ತ ಚಿಕಿತ್ಸೆ, ಪರೀಕ್ಷಾ ಸೌಲಭ್ಯ ಕಲ್ಪಿಸುವ ನಿರ್ಧಾರಕ್ಕೆ ಬರಲಾಗಿದೆ.

Advertisement

ಜೊತೆಗೆ, ಕೊರೊನಾ ಪೀಡಿತರ ಚಿಕಿತ್ಸೆಗೆ ನೆರವಾಗುವ ವೆಂಟಿಲೇಟರ್‌ಗಳನ್ನೂ ನಿರ್ಮಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಪಂಜಾಬ್‌ನಲ್ಲಿರುವ ಕಪೂರ್ತಲಾದಲ್ಲಿರುವ ರೈಲ್ವೆ ಕೋಚ್‌ ಫ್ಯಾಕ್ಟರಿಗೆ (ಆರ್‌ಸಿಎಫ್), ಎಲ್‌ಎಚ್‌ಬಿ ಬೋಗಿಗಳನ್ನು ಆಸ್ಪತ್ರೆ ವಾರ್ಡ್‌ಗಳು ಹಾಗೂ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸುವಂತೆ ಸೂಚನೆ ನೀಡಲಾಗಿದೆ. ಚೆನ್ನೈನಲ್ಲಿರುವ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಗೆ (ಐಸಿಎಫ್) ವೆಂಟಿಲೇಟರ್‌ಗಳನ್ನು ತಯಾರಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next