Advertisement

ದೇಶಾದ್ಯಂತ 2023ಕ್ಕೆ ಓಡಲಿವೆ ಖಾಸಗಿ ರೈಲುಗಳು

10:38 AM Jul 06, 2020 | Hari Prasad |

ಹೊಸದಿಲ್ಲಿ: ಭಾರತೀಯ ರೈಲ್ವೇ ಇಲಾಖೆಯು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸ­ಗೀ­ಕರಣಕ್ಕೆ ಮುಂದಾಗಿದೆ.

Advertisement

ಅದರ ಭಾಗವಾಗಿ, ದೇಶದ ಆಯ್ದ 109 ಜೋಡಿ ರೈಲು ಮಾರ್ಗ­ಗಳಲ್ಲಿ 151 ಅತ್ಯಾಧುನಿಕ ರೈಲುಗಳ ಸೇವೆ­ಯನ್ನು ನೀಡುವ ನಿಟ್ಟಿನಲ್ಲಿ ಖಾಸಗಿ ವಲಯ­ಗಳಿಂದ ಟೆಂಡರ್‌ ಆಹ್ವಾನಿಸಿದೆ.

ನಿರೀಕ್ಷೆಯಂತೆ ಎಲ್ಲವೂ ಕೈಗೂಡಿದರೆ, ಇಲಾ­ಖೆಗೆ 30,000 ಕೋಟಿ ರೂ. ಬಂಡವಾಳ ಹರಿದು­ಬರುವ ನಿರೀಕ್ಷೆಯಿದೆ.

ಕೇಂದ್ರ ಸರಕಾರ ಹಾಕಿ­ಕೊಂಡಿ­ರುವ ಗುರಿಯ ಪ್ರಕಾರ 2023ರ ಎಪ್ರಿಲ್‌ನಲ್ಲಿ ಖಾಸಗಿ ಕಂಪೆನಿಗಳ ರೈಲುಗಳು ಓಡಬೇಕಾ­ಗಿದೆ.

ವಿಮಾನ ಕಂಪೆನಿಗಳ ಟಿಕೆಟ್‌ಗಳಂತೆ ರೈಲು ಟಿಕೆಟ್‌ ಕೂಡ ಸ್ಪರ್ಧಾತ್ಮಕವಾಗಿ ಇರಲಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ರೈಲ್ವೇ ಇಲಾಖೆಯ ಖಾಸಗೀಕರಣಕ್ಕೆ ಕಳೆದ ವರ್ಷವೇ ಶ್ರೀಕಾರ ಹಾಕಲಾಗಿತ್ತು. ಐಆರ್‌ಸಿಟಿಸಿ ವತಿಯಿಂದ ಲಕ್ನೋ-ದೆಹಲಿ ಮಾರ್ಗ­ದಲ್ಲಿ ತೇಜಸ್‌ ಎಕ್ಸ್‌ಪ್ರೆಸ್‌ ಎಂಬ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿತ್ತು.

ವ್ಯವಹಾರ ಹೇಗೆ?: ದೇಶದ ರೈಲ್ವೇ ನೆಟ್‌
ವರ್ಕ್‌ನ 12 ಕ್ಲಸ್ಟರ್‌ಗಳ, 109 ನಿಲ್ದಾಣಗಳಿಂದ ಶುರುವಾಗುವ ಜೋಡಿ ಮಾರ್ಗಗಳಲ್ಲಿ 151 ಅತ್ಯಾಧುನಿಕ ರೈಲುಗಳು ಸೇವೆಗೆ ಇಳಿಯಲಿವೆ. ಪ್ರತಿ ಕಂಪೆನಿಗೆ ತಲಾ 3 ಕ್ಲಸ್ಟರ್‌ಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿರಲಿದೆ. ಪ್ರತಿ­ಯೊಂದು ರೈಲಿನಲ್ಲಿ 16 ಕೋಚ್‌ಗಳು ಇರಲಿವೆ. ಪ್ರತಿ ರೈಲಿನ ಗರಿಷ್ಟ ವೇಗವನ್ನು ಗಂಟೆಗೆ 160 ಕಿ.ಮೀ.ಗಳಿಗೆ ನಿಗದಿಗೊಳಿಸ­ಲಾಗಿದೆ.

ಯಾವುದೇ ಖಾಸಗಿ ಕಂಪನಿಯು ರೈಲ್ವೇ ಇಲಾಖೆಯ ಜೊತೆಗೆ ಮಾಡಿಕೊಳ್ಳುವ ಒಪ್ಪಂದಕ್ಕೆ 35 ವರ್ಷದ ಕಾಲಾವಧಿ ಇರಲಿದೆ. ಪ್ರತಿ ರೈಲಿನ ಓಡಾಟಕ್ಕೆ ತಕ್ಕಂತೆ ಮಾರ್ಗ ಉಪಯೋಗಿ ಶುಲ್ಕ, ಇಂಧನ ಶುಲ್ಕವನ್ನು ಪಾವತಿಸಲಿದೆ. ಈ ರೈಲುಗಳ ಚಾಲಕ ಹಾಗೂ ಗಾರ್ಡ್‌ಗಳು ರೈಲ್ವೇ ಇಲಾಖೆಯವರೇ ಆಗಿರಲಿದ್ದಾರೆ.

ಶೇ.100 ಸಮಯ ಪಾಲನೆ ಮಾಡಿದ ರೈಲ್ವೇ
ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ 201 ರೈಲುಗಳು ಸರಿಯಾದ ಸಮಯಕ್ಕೆ ಬಂದು ದಾಖಲೆ ನಿರ್ಮಿಸಿವೆ! ಈ ಐತಿಹಾಸಿಕ ಘಟನೆ ನಡೆದಿರುವುದು ಜು.1­ರಂದು. ಬುಧವಾರ ಎಲ್ಲ ರೈಲುಗಳು ಶೇ.100ರಷ್ಟು ಸಮಯ ಪಾಲನೆ ಮಾಡಿವೆ.

ಜೂ.23­ರಂದು ಶೇ.99.54ರಷ್ಟು ರೈಲುಗಳು ಸಮಯ­ಪಾಲನೆ ಮಾಡಿದ್ದು ಈ ಹಿಂದಿನ ದಾಖಲೆ­ಯಾಗಿತ್ತು. ಇದೀಗ ಎಲ್ಲ 201 ರೈಲುಗಳು ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಿವೆ ಮತ್ತು ಅಲ್ಲಿಂದ ಹೊರಟಿವೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಪ್ರಸ್ತುತ ರೈಲ್ವೆಯ ಸಾಮಾನ್ಯ ಪ್ಯಾಸೆಂಜರ್‌ ರೈಲುಗಳು ರದ್ದಾ­ಗಿದ್ದು, ಅನಿ­ವಾರ್ಯ­ವಾಗಿ ಪ್ರಯಾಣ ಮಾಡಬೇಕಿ­ರುವವರಿಗೆ ಅನುಕೂಲ­ವಾಗು­ವಂತೆ ಆಯ್ದ ಕೆಲವು ಮಾರ್ಗಗಳಲ್ಲಿ ವಿಶೇಷ ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next