Advertisement

ಭಾರತೀಯ ರೈಲ್ವೇಯ IRCTCಯಿಂದ 8.5 ಲಕ್ಷ ಜನರಿಗೆ ಆಹಾರ ವಿತರಣೆ

08:07 PM Apr 10, 2020 | Hari Prasad |

ನವದೆಹಲಿ: ಕೋವಿಡ್ ಸಂಬಂಧಿತ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವವರ ನೆರವಿಗೆ ಭಾರತೀಯ ರೈಲ್ವೇ ಧಾವಿಸಿದೆ. ಲಾಕ್ ಡೌನ್ ಆದಾಗಿನಿಂದ ಇಲ್ಲಿಯವರೆಗೆ ರೈಲ್ವೇ ಸುಮಾರು 8.5 ಜನರಿಗೆ ಊಟವನ್ನು ವಿತರಿಸುವ ಕಾರ್ಯವನ್ನು ಮಾಡಿದೆ.

Advertisement

ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿ ಭಾರತೀಯ ರೈಲ್ವೇಯ ಕೆಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಘಟಕವು ಸಚಿವ ಈ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ದೇಶದ ವಿವಿಧ ಕಡೆಗಳಲ್ಲಿ ಇರುವ IRCTCಯ ಅಡುಗೆ ಮನೆಗಳಲ್ಲಿ ತಯಾರಿಸಿದ ಆಹಾರವನ್ನು ಹಸಿದವರಿಗೆ ವಿತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ರೈಲ್ವೇಯ ಈ ಕಾರ್ಯದಲ್ಲಿ ರೈಲ್ವೇ ರಕ್ಷಣಾ ದಳ ಹಾಗೂ ಕೆಲವೊಂದು ಸರಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ದೇಶಾದ್ಯಂತ ಈ ಆಹಾರ ವಿತರಣೆಯ ಕೆಲಸ ನಡೆಯುತ್ತಿದೆ.

ಬಡವರಿಗೆ, ಭಿಕ್ಷುಕರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ, ಲಾಕ್ ಡೌನ್ ನಿಂದಾಗಿ ತಮ್ಮ ಸ್ವಂತ ಊರುಗಳಿಗೆ ತೆರಳಲಾಗದೆ ಸಿಲುಕಿಕೊಂಡವರಿಗೆ ಹಾಗೂ ವಿವಿಧ ರೈಲ್ವೇ ನಿಲ್ದಾಣಗಳ ಬಳಿ ಮತ್ತು ಸಮೀಪದ ಪ್ರದೇಶಗಳಲ್ಲಿ ಆಹಾರವನ್ನು ಹುಡುಕಿಕೊಂಡು ಬರುವವರಿಗೆ ಈ ರೀತಿಯಾಗಿ ರೈಲ್ವೇ ಇಲಾಖೆ ಆಹಾರವನ್ನು ಒದಗಿಸುವ ಕೆಲಸವನ್ನು ಮಾಡುತ್ತಿದೆ.

ದೆಹಲಿ, ಪುಣೆ, ಹೌರಾ, ಹುಬ್ಬಳ್ಳಿ, ಮುಂಬಯಿ ಸೆಂಟ್ರಲ್, ಬೆಂಗಳೂರು, ಅಹಮದಾಬಾದ್, ಪಟ್ನಾ, ಗಯಾ, ರಾಂಚಿ, ವಿಜಯವಾಡ, ತಿರುಚನಾಪಳ್ಳಿ, ಗೌಹಾತಿ, ಸಮಷ್ಟಿಪುರ, ಪ್ರಯಾಗ್ ರಾಜ್, ವಿಶಾಖಪಟ್ಟಣ, ರಾಯ್ಪುರ ಹೀಗೆ ದೇಶದ ವಿವಿಧ ಭಾಗಗಳಲ್ಲಿ ಇರುವ ಐ.ಆರ್.ಸಿ.ಟಿ.ಸಿಯ ಕಿಚನ್ ಗಳಲ್ಲಿ ಆಹಾರವನ್ನು ತಯಾರಿಸಿ ಪ್ರತೀದಿನ ವಿತರಿಸುವ ಕಾರ್ಯ ನಡೆಯುತ್ತಿದೆ.

ಇದುವರೆಗೆ ಒದಗಿಸಲಾದ ಒಟ್ಟು 8 ಲಕ್ಷ ಊಟಗಳಲ್ಲಿ ಆರು ಲಕ್ಷ ಊಟವನ್ನು ಐ.ಆರ್.ಸಿ.ಟಿ.ಸಿ ಒದಗಿಸಿದ್ದರೆ, ಎರಡು ಲಕ್ಷ ಊಟವನ್ನು ರೈಲ್ವೇ ರಕ್ಷಣಾ ದಳ ತನ್ನ ಮೂಲಗಳಿಂದ ನೀಡಿದೆ ಇನ್ನು ಸುಮಾರು 1.5 ಲಕ್ಷದಷ್ಟು ಊಟವನ್ನು ರೈಲ್ವೇ ಇಲಾಖೆಯ ಜೊತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್.ಜಿ.ಒ.ಗಳ ಕಡೆಯಿಂದ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

ಇಷ್ಟು ಮಾತ್ರವಲ್ಲದೇ ಸುಮಾರು 20 ಕೋಟಿ ರೂಪಾಯಿಗಳಷ್ಟು ಹಣವನ್ನು ಐ.ಆರ್.ಸಿ.ಟಿ.ಸಿ. ಪಿ.ಎಂ.-ಕೇರ್ಸ್ ಫಂಡ್ ನಲ್ಲಿ ಡಿಪಾಸಿಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next