Advertisement

ಜೂನ್ 30ರವರೆಗೆ ಪ್ರಯಾಣಿಕರ ರೈಲು ಸೇವೆ ರದ್ದು; ಶ್ರಮಿಕ್, ವಿಶೇಷ ರೈಲು ಓಡಾಟ ಮುಂದುವರಿಕೆ

08:57 AM May 15, 2020 | Nagendra Trasi |

ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳ ಟಿಕೆಟ್ ಅನ್ನು ಜೂನ್ 30ರವರೆಗೆ ರದ್ದುಗೊಳಿಸಿರುವುದಾಗಿ ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

Advertisement

ಜೂನ್ 30ರೊಳಗಿನ ಪ್ರಯಾಣಕ್ಕಾಗಿ ಮಾರ್ಚ್ 22ಕ್ಕೂ ಮೊದಲು ಕಾಯ್ದಿರಿಸಿದ್ದ ರೈಲು ಟಿಕೆಟ್ ಅನ್ನು ರದ್ದುಪಡಿಸಲಾಗಿದೆ. ಅಲ್ಲದೇ ಟಿಕೆಟ್ ನ ಪೂರ್ಣ ಹಣವನ್ನು ಪ್ರಯಾಣಿಕರಿಗೆ ವಾಪಸ್ ನೀಡಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಆದರೆ ಶ್ರಮಿಕ್ ವಿಶೇಷ ರೈಲು ಹಾಗೂ ವಿಶೇಷ ರೈಲು ಮೇ 12ರಿಂದ ಆರಂಭಗೊಂಡಿದ್ದು, ಲಾಕ್ ಡೌನ್ ನಿಂದ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಪ್ರಯಾಣಿಸಲು ಅನುಕೂಲವಾಗುವ ವಿಶೇಷ ರೈಲು ಸಂಚಾರ ಯಾನ ಮುಂದುವರಿಯಲಿದೆ ಎಂದು ಹೇಳಿದೆ.

ವಿವಿಧ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನು ಕರೆದೊಯ್ಯಲು ದೇಶಾದ್ಯಂತ ಸುಮಾರು 15 ಮಾರ್ಗಗಳಲ್ಲಿ ವಿಶೇಷ ರೈಲು ಸಂಚರಿಸುತ್ತಿದೆ. ಆದರೆ ಪ್ರಯಾಣಿಕರ ರೈಲು ಟಿಕೆಟ್ ಅನ್ನು ರದ್ದುಪಡಿಸಲಾಗಿದೆ. ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 25ರಿಂದ ಮೇಲ್, ಎಕ್ಸ್ ಪ್ರೆಸ್, ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರಗಳನ್ನು ರದ್ದುಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next