Advertisement

World Cup Final: ಭಾರತೀಯ ರೈಲ್ವೆಯಿಂದ ಅಹ್ಮದಾಬಾದ್ ಗೆ ವಿಶೇಷ ರೈಲು

11:12 AM Nov 18, 2023 | sudhir |

ಅಹ್ಮದಾಬಾದ್: ನಾಳೆ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ – ಆಸ್ಟ್ರೇಲಿಯಾ ನಡುವೆ ಹೈ ವೋಲ್ಟೇಜ್ ಪಂದ್ಯಾವಳಿ ನಡೆಯಲಿದೆ.

Advertisement

ಈಗಾಗಲೇ ಫೈನಲ್ ಪಂದ್ಯಾವಳಿಯನ್ನು ವೀಕ್ಷಣೆ ಮಾಡಲು ಅಹ್ಮದಾಬಾದ್ ಗೆ ತೆರಳುವ ಜನರ ಸಂಖ್ಯೆ ಹೆಚ್ಚಳವಾಗಿದ್ದು ಅದರಂತೆ ಅಲ್ಲಿನ ಹೋಟೆಲ್ ದರದಲ್ಲೂ ಹೆಚ್ಚಳವಾಗಿದೆ. ಅಷ್ಟು ಮಾತ್ರವಲ್ಲದೆ ವಿಮಾನ ಪ್ರಯಾಣ ದರವೂ ಹೆಚ್ಚಳ ಮಾಡಿದೆ.

ಇದರ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರ ಫೈನಲ್‌ಗೆ ತೆರಳುವ ಪ್ರಯಾಣಿಕರ ಹೆಚ್ಚಳಕ್ಕೆ ಅನುಗುಣವಾಗಿ ಭಾರತೀಯ ರೈಲ್ವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ.

ವಿಶೇಷ ರೈಲು ಸೇವೆ ದೆಹಲಿ ಮತ್ತು ಮುಂಬೈನಿಂದ ಅಹ್ಮದಾಬಾದ್‌ಗೆ ಕಾರ್ಯನಿರ್ವಹಿಸಲಿದೆ. ರೈಲುಗಳು ಶನಿವಾರ ಸಂಜೆ ಹೊರಟು ಮರುದಿನ ಬೆಳಿಗ್ಗೆ ಅಹ್ಮದಾಬಾದ್‌ಗೆ ಆಗಮಿಸುತ್ತವೆ. ದೆಹಲಿಯಿಂದ ಒಂದು ರೈಲು ಹೊರಡಲಿದ್ದು ಅದರಂತೆ ಮುಂಬೈನಿಂದ ಅಹಮದಾಬಾದ್‌ಗೆ ಮೂರು ವಿಶೇಷ ರೈಲು ಸಂಚರಿಸಲಿದೆ.

ಎಲ್ಲಾ ಸಾಮಾನ್ಯ ರೈಲುಗಳು ಭರ್ತಿಯಾಗಿರುವುದರಿಂದ ವಿಶೇಷ ರೈಲುಗಳಲ್ಲಿ ಆಸನಗಳು ಕಡಿಮೆ ದರದಲ್ಲಿ ಲಭ್ಯವಿವೆ ಎಂದು ಭಾರತೀಯ ರೈಲ್ವೇ ಖಚಿತಪಡಿಸಿದೆ.

Advertisement

ಈಗಾಗಲೆ ಫೈನಲ್ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ಮಾರಾಟಗೊಂಡಿದ್ದು. ಸಾಮಾನ್ಯವಾಗಿ 24 ಸಾವಿರ ರೂಪಾಯಿಗೆ ಲಭ್ಯವಿರುವ ತ್ರಿ-ಸ್ಟಾರ್ ಹೋಟೆಲ್ ಕೊಠಡಿಗಳ ಒಂದು ದಿನದ ಬಾಡಿಗೆ ಈಗ 2 ಲಕ್ಷ ರೂಗಳಿಗೆ ಏರಿಕೆಯಾಗಿದೆ. ವಿಮಾನ ಪ್ರಯಾಣ ದರವೂ ಶೇ.200ರಿಂದ 300ರಷ್ಟು ಹೆಚ್ಚಳ ಕಂಡಿವೆ. ನವೆಂಬರ್ 18ರಂದು ದೆಹಲಿ ಹಾಗೂ ಅಹಮದಾಬಾದ್ ನಡುವಿನ ವಿಮಾನ ಪ್ರಯಾಣ ದರ 15 ಸಾವಿರ ರೂಪಾಯಿಗೆ ಏರಿಕೆ ಕಂಡಿದೆ.

ಇದನ್ನೂ ಓದಿ: Viral Video… ಮಿಕ್ಸಿ ಕೆಟ್ಟು ಹೋದ್ರೆ ತಲೆಬಿಸಿ ಮಾಡ್ಕೋಬೇಡಿ… ಇಲ್ಲಿದೆ ಹೊಸ ಉಪಾಯ

Advertisement

Udayavani is now on Telegram. Click here to join our channel and stay updated with the latest news.

Next