Advertisement

Indian Population: 2024ರ ಚುನಾವಣೆ ಬಳಿಕ ಜನಗಣತಿ

12:15 AM Apr 21, 2023 | Team Udayavani |

ನವದೆಹಲಿ: ಭಾರತದ ಜನಸಂಖ್ಯೆಯು ಚೀನಾದ ಜನಸಂಖ್ಯೆಯನ್ನು ಮೀರಿ ಮುಂದೆ ಸಾಗುತ್ತಿರುವಂತೆಯೇ, ದೇಶದ ಜನಗಣತಿಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 2021ರಲ್ಲೇ ನಡೆಯಬೇಕಿದ್ದ ಗಣತಿಯು ಕೊರೊನಾ, ಎನ್‌ಆರ್‌ಸಿಗೆ ವಿರೋಧ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮುಂದೂಡಿ, ಈಗ 2024-25ಕ್ಕೆ ಮುಂದೂಡಲ್ಪಟ್ಟಿದೆ.

Advertisement

ಜನಗಣತಿ ಪ್ರಕ್ರಿಯೆಗೆ ವ್ಯಾಪಕ ಫೀಲ್ಡ್‌ವರ್ಕ್‌ ಇರುತ್ತದೆ. 2020ರಲ್ಲಿ ಕೊರೊನಾ ಸೋಂಕು ವ್ಯಾಪಿಸಿದ ಕಾರಣ ಅದನ್ನು ಮುಂದೂಡಲಾಯಿತು. ನಂತರ, ಗಣತಿಗೂ ಮುನ್ನ ನಡೆಯಬೇಕಾದ ಕೆಲವು ಪ್ರಕ್ರಿಯೆಗಳನ್ನು ಮಾಡಿ ಮುಗಿಸಲು ರಿಜಿಸ್ಟ್ರಾರ್‌ ಜನರಲ್‌ ಆಫ್ ಇಂಡಿಯಾ(ಆರ್‌ಜಿಐ) 2023ರ ಜೂ.30ರ ಗಡುವು ವಿಧಿಸಿತ್ತು. ಆದರೆ, ಮುಂದಿನ ವರ್ಷವೇ ಲೋಕಸಭೆ ಚುನಾವಣೆಯೂ ನಡೆಯಲಿರುವ ಕಾರಣ, ಗಣತಿ ಕಾರ್ಯ ಮುಂದಿನ ವಿತ್ತೀಯ ವರ್ಷಕ್ಕೆ ಮುಂದೂಡಿದಂತಾಗಿದೆ.

ಗಣತಿಗೂ ಮುನ್ನ, ಪ್ರತಿಯೊಂದು ರಾಜ್ಯವೂ ತನ್ನ ಅಧಿಸೂಚಿತ ಜಿಲ್ಲೆಗಳು, ಗ್ರಾಮಗಳು, ನಗರ ಗಳು, ತೆಹ್ಸಿಲ್‌, ತಾಲೂಕುಗಳು, ಪೊಲೀಸ್‌ ಠಾಣೆ ಗಳು ಸೇರಿಇತರೆ ಆಡಳಿತಾತ್ಮಕ ಘಟಕಗಳ ಸಂಖ್ಯೆಗಳಲ್ಲಿ ಆಗಿರುವ ಬದಲಾವಣೆಗಳ ಮಾಹಿತಿಯನ್ನು ಒದಗಿಸಬೇಕು. ಇವೆಲ್ಲವೂ ದೀರ್ಘ‌ಕಾಲಿಕ ಪ್ರಕ್ರಿಯೆಯಾಗಿರುವ ಕಾರಣ, ಸದ್ಯಕ್ಕಂತೂ ಜನಗಣತಿ ಕೆಲಸ ಆರಂಭವಾಗುವ ಲಕ್ಷಣವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next