ಕೊಲಂಬೋ: ಭಾರತ-ಶ್ರೀಲಂಕಾ ನಡುವಿನ ಟಿ20 ಸರಣಿಗೆ ಕೋವಿಡ್ ಕಂಟಕ ಎದುರಾಗಿದೆ. ಭಾರತ ತಂಡದ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್ ದೃಢವಾದ ಹಿನ್ನೆಲೆಯಲ್ಲಿ ಇಲ್ಲಿನ ಪ್ರೇಮದಾಸ ಸ್ಟೇಡಿಯಂ ನಲ್ಲಿ ಇಂದು ನಡೆಯಬೇಕಿದ್ದ ಟಿ20 ಪಂದ್ಯ ರದ್ದಾಗಿದೆ.
ಭಾರತ ಮತ್ತು ಶ್ರೀಲಂಕಾ ತಂಡವನ್ನು ಐಸೋಲೇಶನ್ ಗೆ ಒಳಪಡಿಸಲಾಗಿದೆ. ಕೃನಾಲ್ ಪಾಂಡ್ಯ ಜೊತೆಗಿದ್ದ ಇತರ ಆಟಗಾರರನ್ನು ಪ್ರತ್ಯೇಕ ಐಸೋಲೇಶನ್ ಗೆ ಒಳಪಡಿಸಲಾಗಿದೆ.
ಸರಣಿಯ ಮೊದಲ ಪಂದ್ಯ ರವಿವಾರ ನಡೆದಿತ್ತು. ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಆಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು.
ಇದನ್ನೂ ಓದಿ:ಅಕ್ಕನ ಸ್ಥೀತಿ ಗಂಭೀರವಾಗಿದೆ ;ಈ ವಿಡಿಯೋ ಸುಮಲತಾ ಅವರಿಗೆ ತಲುಪಿಸಿ ಎಂದ ನಟಿ ವಿಜಯಲಕ್ಷ್ಮಿ
ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಗೆ ತೆರಳಿರುವ ವಿರಾಟ್ ಪಡೆಗೂ ಕೋವಿಡ್ ಕಂಟಕ ಎದುರಾಗಿತ್ತು. ವಿಕೆಟ್ ಕೀಪರ್ ಆಟಗಾರ ರಿಷಭ್ ಪಂತ್ ಮತ್ತು ಥ್ರೋ ಡೌನ್ ಬೌಲರ್ ಗೆ ಕೋವಿಡ್ ಪಾಸಿಟಿವ್ ಆಗಿತ್ತು. ಸದ್ಯ ಅವರೆಲ್ಲರೂ ಗುಣಮುಖರಾಗಿದ್ದಾರೆ.