Advertisement

ಭಾರತೀಯ ವೈದ್ಯ ಪದ್ಧತಿಗಳು ಸಾರ್ವಕಾಲಿಕ: ಯಡಪಡಿತ್ತಾಯ

11:21 PM Feb 03, 2021 | Team Udayavani |

ಮಂಗಳೂರು: ಭಾರತೀಯ ವೈದ್ಯ ಪದ್ಧತಿಗಳು ಸಾರ್ವಕಾಲಿಕವಾಗಿದ್ದು ಈ ಹಿಂದೆ ನಮ್ಮ ಜೀವನದ ಭಾಗವಾಗಿದ್ದವು. ಪ್ರಕೃತಿದತ್ತವಾದ ಆರೋಗ್ಯವನ್ನು ಪಡೆಯುವಲ್ಲಿ ನ್ಯಾಚುರೋಪತಿ ಚಿಕಿತ್ಸೆ ಸಹಜ ಮತ್ತು ಸರಳ ವಿಧಾನವಾಗಿದೆ. ಇದರ ಪರಿಚಯ ಮತ್ತು ಸದುಪಯೋಗಪಡೆದುಕೊಳ್ಳುವು ದಕ್ಕಾಗಿ ಈ ಶಿಬಿರವನ್ನು ಹಮ್ಮಿಕೊಳ್ಳಲಾ ಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಅಭಿಪ್ರಾಯಪಟ್ಟರು.

Advertisement

ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಉಚಿತ ಬೃಹತ್‌ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ದೂರದರ್ಶಿತ್ವದ ಶಿಕ್ಷಣತಜ್ಞ ಪ್ರೊ| ಎಂ.ಬಿ. ಪುರಾಣಿಕ್‌ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ಶಾರದಾ ಸಮೂಹ ಸಂಸ್ಥೆಗಳು, ಭಾರತೀಯರಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಸಾರವನ್ನು ಈ ಮೊದಲೇ ಅಳವಡಿಸಿಕೊಂಡು, ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿವೆ. ಸಮಾನ ಮನಸ್ಕ ಸಂಸ್ಥೆಗಳೊಂದಿಗಿನ ಕೂಡಿಕೆ ಪರಸ್ಪರ ಖ್ಯಾತಿ ಮತ್ತು ಗೌರವವನ್ನು ತಂದುಕೊಡುತ್ತದೆ. ಈ ನಿಟ್ಟಿನಲ್ಲಿ ಶಾರದಾ ಸಮೂಹ ಸಂಸ್ಥೆಯೊಂದಿಗಿನ ಸಹಯೋಗ ಪರಸ್ಪರ ಗೌರವವನ್ನು ಹೆಚ್ಚಿಸಿದೆ ಎಂದರು.

ಇದನ್ನೂ ಓದಿ: ಬಂಟ್ವಾಳ: ಕಂಟೈನರ್  ಲಾರಿಗೆ  ಗ್ಯಾಸ್ ಟ್ಯಾಂಕರ್  ಡಿಕ್ಕಿ. ಸಂಚಾರ ಅಸ್ತವ್ಯಸ್ಥ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್‌ ವಹಿಸಿದ್ದರು. ಮುಖ್ಯ ವೈದ್ಯಾಧಿಕಾರಿ ಮತ್ತು ಪ್ರಾಂಶುಪಾಲ ಡಾ| ರಾಜೇಶ್‌ ಪಾದೇಕಲ್‌ ಪ್ರಾಸ್ತಾವಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ| ವಿಜಯಲಕ್ಷ್ಮೀ ಸ್ವಾಗತಿಸಿದರು. ಸಮೂಹ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಸಮೀರ್‌ ಪುರಾಣಿಕ್‌, ಆಡಳಿತಾಧಿಕಾರಿ ವಿವೇಕ್‌ ತಂತ್ರಿ, ಶಾರದಾ ಆಯುರ್ವೇದ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ ಡಾ| ರವಿಗಣೇಶ್‌ ಮೊಗ್ರ, ಸಂಸ್ಥೆಯ ಸಿಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಡಾ| ಶಿಲ್ಪಾ ನಿರೂಪಿಸಿ, ಡಾ| ಪದ್ಮಶ್ರೀ ವಂದಿಸಿದರು. ಯೋಜನಾಧಿಕಾರಿ ವಿಕ್ರಮ್‌ ಕುಂಟಾರ್‌ ಶಿಬಿರ ಸಂಘಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next