Advertisement

ವೀಸಾ ರಹಿತ ಮಲೇಷ್ಯಾ ಪ್ರವಾಸಕ್ಕೆ ಅವಕಾಶ

10:03 AM Jan 04, 2020 | Team Udayavani |

ನವದೆಹಲಿ: ನೀವು ಮಲೇಷ್ಯಾ ಪ್ರವಾಸದ ಕನಸು ಹೊತ್ತಿದ್ದರೆ, ಈ ವರ್ಷ ಇದು ಸುಲಭವಾಗಿ ಈಡೇರಲಿದೆ. ವೀಸಾ ಬೇಕಾಗಿಲ್ಲ. ನಿಮ್ಮ ಬಳಿ ಪಾಸ್‌ಪೋರ್ಟ್‌ ಇದ್ದರೆ ಸಾಕು. ವೀಸಾ ರಹಿತವಾಗಿ 15 ದಿನಗಳ ಕಾಲ ಮಲೇಷ್ಯಾ ಸುತ್ತಾಡಬಹುದು.

Advertisement

ಭಾರತೀಯ ಹಾಗೂ ಚೀನಾ ಪ್ರಜೆಗಳಿಗೆ ವೀಸಾ ರಿಯಾಯಿತಿ ನೀಡಲಾಗಿದೆ. ವಿದ್ಯುನ್ಮಾನ ಪ್ರವಾಸ ನೋಂದಣಿ ಹಾಗೂ ಮಾಹಿತಿ ವ್ಯವಸ್ಥೆಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಒಂದು ಬಾರಿ ನೋಂದಣಿಯಾದರೆ ಮೂರು ತಿಂಗಳೊಳಗೆ ಯಾವಾಗ ಬೇಕಾದರೂ ಮಲೇಷ್ಯಾ ಪ್ರವಾಸ ಕೈಗೊಳ್ಳಬಹುದು. ಇದು ಜ.1ರಿಂದ ಡಿ.31 ರವರೆಗೆ ಜಾರಿಯಲ್ಲಿರುತ್ತದೆ ಎಂದು ಮಲೇಷ್ಯಾ ಸರ್ಕಾರ ತಿಳಿಸಿದೆ.

ಇತ್ತೀಚೆಗೆ ಚೀನಾ ಹಾಗೂ ಭಾರತದಿಂದ ಸಾಕಷ್ಟು ಸಂಖ್ಯೆಯಲ್ಲಿ ಮಲೇಷ್ಯಾ ಪ್ರವಾಸ ಕೈಗೊಳ್ಳಲಾಗುತ್ತಿದೆ. ಇದೀಗ ವೀಸಾ ರಹಿತ ಪ್ರವಾಸದಿಂದ ಇಲ್ಲಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ. ಇತ್ತೀಚೆಗೆ ಶ್ರೀಲಂಕಾ ದೇಶಕ್ಕೂ ವೀಸಾ ರಹಿತ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next