Advertisement

ಅಭಿಮನ್ಯು ಮಿಥುನ್‌ ವಿದಾಯ 

11:21 PM Oct 07, 2021 | Team Udayavani |

ಬೆಂಗಳೂರು: ಕರ್ನಾಟಕದ ಪೇಸ್‌ ಬೌಲರ್‌ ಅಭಿಮನ್ಯು ಮಿಥುನ್‌ ಪ್ರಥಮ ದರ್ಜೆ ಕ್ರಿಕೆಟಗೆ ವಿದಾಯ ಘೋಷಿಸಿದರು. ಅವರು ಭಾರತದ ಪರ 4 ಟೆಸ್ಟ್‌ (9 ವಿಕೆಟ್‌) ಮತ್ತು 5 ಏಕದಿನ ಪಂದ್ಯಗಳನ್ನಾಡಿದ್ದರು (3 ವಿಕೆಟ್‌).

Advertisement

ಆರಂಭದಲ್ಲಿ ಡಿಸ್ಕಸ್‌ ತ್ರೋವರ್‌ ಆಗಿದ್ದ ಮಿಥುನ್‌, 103 ಪ್ರಥಮ ದರ್ಜೆ ಪಂದ್ಯಗಳಿಂದ 26.63ರ ಸರಾಸರಿಯಲ್ಲಿ 338 ವಿಕೆಟ್‌ ಉರುಳಿಸಿದ ಹೆಗ್ಗಳಕೆ ಹೊಂದಿದ್ದಾರೆ. 96 ಲಿಸ್ಟ್‌ ಎ, 74 ಟಿ20 ಪಂದ್ಯಗಳಿಂದ 205 ವಿಕೆಟ್‌ ಕೆಡವಿದ್ದಾರೆ.

2010ರ ಶ್ರೀಲಂಕಾ ಪ್ರವಾಸದ ವೇಳೆ ಗಾಲೆಯಲ್ಲಿ ಟೆಸ್ಟ್‌ ಪದಾರ್ಪಣೆಗೈದಿದ್ದರು. ಇದಕ್ಕೂ 5 ತಿಂಗಳು ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನಕ್ಕೆ ಅಡಿಯಿರಿಸಿದ್ದರು. ಆರ್‌ಸಿಬಿ, ಮುಂಬೈ ಮತ್ತು ಹೈದರಾಬಾದ್‌ ಪರ ಒಟ್ಟು 16 ಐಪಿಎಲ್‌ ಪಂದ್ಯಗಳಲ್ಲೂ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next