Advertisement

ಬಾತ್‌ರೂಂನಲ್ಲಿ ಮಗುವಿಗೆ ಜನ್ಮವಿತ್ತು ಹೊರಕ್ಕೆಸೆದಳು!

12:07 PM Nov 03, 2015 | mahesh |

ನ್ಯೂಯಾರ್ಕ್‌: ಭಾರತೀಯ ಮೂಲದ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ಮಗುವಿಗೆ ಜನ್ಮ ನೀಡಿ, ಅನಂತರ ಆ ಮಗುವನ್ನು ಬಾತ್‌ರೂಮಿನ ಕಿಟಕಿಯಿಂದ ಹೊರಕ್ಕೆಸೆದ ಭಯಾನಕ ಘಟನೆ ವರದಿಯಾಗಿದೆ. ನ್ಯೂಯಾರ್ಕ್‌ನ ಕ್ವೀನ್ಸ್‌ನ ನಿವಾಸಿಯಾಗಿ ರುವ 23 ವರ್ಷದ ಸಬಿತಾ ಡೂಕ್ರಮ್‌ ವಿರುದ್ಧ ಪೊಲೀ ಸರು ಈಗ ಕೊಲೆಯತ್ನದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

Advertisement

ತಾನು ಸ್ನಾನ ಮಾಡುವಾಗ ಹೆರಿಗೆಯಾ ಗಿದ್ದು, ಗಾಬರಿಗೊಂಡು ಈ ಕೃತ್ಯ ಎಸಗಿದ್ದಾಗಿ ಸಬಿತಾ ಹೇಳುತ್ತಿದ್ದಾಳೆ. ಮಗುವನ್ನು ಕಿಟಕಿಯಿಂದ ಹೊರಕ್ಕೆಸೆದೆ ಅನಂತರ ಆಕೆ ಬಾತ್‌ರೂಮನ್ನು ಸ್ವಚ್ಛಗೊಳಿಸಿ, ಅನಂತರ ಕೆಲವು ಕಾಲ ನಿದ್ದೆಯೂ ಮಾಡಿದ್ದಳಂತೆ!

ತೀವ್ರವಾಗಿ ಗಾಯಗೊಂಡಿದ್ದ ಮಗುವಿನ ಅಳು ನೆರೆಯ ಮನೆಯ ವರಿಗೆ ಕೇಳಿಸಿದ್ದು, ಅವರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೆಳಕ್ಕೆ ಬಿದ್ದ ರಭಸಕ್ಕೆ ಮಗುವಿನ ಮೆದು ಳಲ್ಲಿ ರಕ್ತ ಸೋರಿದ್ದು, ಮೂಳೆಯೂ ಮುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next