Advertisement

ಕ್ಯಾಲಿಫೋರ್ನಿಯ ಗವರ್ನರ್‌ ಹುದ್ದೆಗೆ 22ರ ಭಾರತೀಯ ಟೆಕ್ಕಿ ಸ್ಪರ್ಧೆ

11:16 AM Jun 02, 2018 | udayavani editorial |

ಕ್ಯಾಲಿಫೋರ್ನಿಯ : 22 ವರ್ಷ ಪ್ರಾಯದ ಸಾಫ್ಟ್ ವೇರ್‌ ಉದ್ಯೋಗಿಯಾಗಿರುವ ಉತ್ತರ ಪ್ರದೇಶ ಮೂಲದ ಶುಭಂ ಗೋಯಲ್‌ ಅವರು ಅಮೆರಿಕದ ಕ್ಯಾಲಿಫೋರ್ನಿಯ ಗವರ್ನರ್‌ ಹುದ್ದೆ ಚುನಾವಣೆಯ ಕಣದಲ್ಲಿದ್ದಾರೆ. ಯುವ ಭಾರತೀಯನಾಗಿರುವ ಕಾರಣಕ್ಕೆ ಎಲ್ಲರ ಗಮನ ಅವರತ್ತ ಕೇಂದ್ರೀಕೃತವಾಗಿದೆ. 

Advertisement

ಕ್ಯಾಲಿಫೋರ್ನಿಯದ ಹಾಲಿ ಗವರ್ನರ್‌ ಜೆರಿ ಬ್ರೌನ್‌ ನಾಲ್ಕು ವರ್ಷಗಳ ಎರಡು ಸೇವಾವಧಿಯನ್ನು ಪೂರೈಸಿರುವುದರಿಂದ ಈಗಿನ್ನು ತೆರವಾಗಲಿರುವ ಅವರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಶುಭಂ ಸ್ಪರ್ಧಿಸಲಿದ್ದಾರೆ. ಕ್ಯಾಲಿಫೋರ್ನಿಯದ ಶೈಕ್ಷಣಿಕ ಸಮಸ್ಯೆ ನಿವಾರಣೆಗೆ ಶುಭಂ ಅವರ ತಾಂತ್ರಿಕ ಜ್ಞಾನ ಹೆಚ್ಚು ಪೂರಕವಾಗಲಿದೆ ಎಂದು ತಿಳಿಯಲಾಗಿರುವುದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಯುವ ಟೆಕ್ಕಿ ಶುಭಂ ಅವರ ತಾಯಿ ಕರುಣಾ ಗೋಯಲ್‌ ಮೀರತ್‌ನವರು; ತಂದೆ ವಿಪುಲ್‌ ಗೋಯಲ್‌ ಸ್ವಂತ ಸಾಫ್ಟ್ ವೇರ್‌ ಕಂಪೆನಿ ನಡೆಸುತ್ತಿದ್ದಾರೆ. ಶುಭಂ ಕ್ಯಾಲಿಫೋನಿರಯ ವಿವಿಯಲ್ಲಿ ಅರ್ಥ ಶಾಸ್ತ್ರ ಮತ್ತು ಸಿನೆಮಾ ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next