Advertisement

ಭಾರತ ಮೂಲದ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

07:25 AM Dec 11, 2017 | Harsha Rao |

ಷಿಕಾಗೋ: ಅಮೆರಿಕದ ಷಿಕಾಗೋದಲ್ಲಿ ಹೈದರಾಬಾದ್‌ ಮೂಲದ ವಿದ್ಯಾರ್ಥಿ ಮೊಹಮ್ಮದ್‌ ಅಕ್ಬರ್ (30) ಮೇಲೆ ಗುಂಡಿನ ದಾಳಿ ನಡೆದಿದೆ. 

Advertisement

ಡಿವೆù ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸಿಸ್ಟಮ್ಸ್‌ ನೆಟ್‌ವರ್ಕಿಂಗ್‌ ಆ್ಯಂಡ್‌ ಟೆಲಿ ಕಮ್ಯೂನಿಕೇಷನ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿರುವ ಮೊಹಮ್ಮದ್‌ ಅಕºರ್‌ ಅವರು, ಸ್ಥಳೀಯ ಕಾಲಮಾನ 8:45ರ ಸುಮಾರಿಗೆ ನಗರದ ಅಲ್ಬನಿ ಪಾರ್ಕ್‌ ಬಳಿಯಲ್ಲಿನ ಕಾರ್‌ ಪಾರ್ಕಿಂಗ್‌ ಬಳಿ ತೆರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಈತನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗುಂಡು ಈತನ ಕೆನ್ನೆಗೆ ತಗುಲಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಯುವಕ ಚಿಕಿತ್ಸೆ ಪಡೆಯುತ್ತಿದ್ದು, ಈತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತ, ಹೈದರಾಬಾದ್‌ನ ಉಪ್ಪಾಲ್‌ನಲ್ಲಿರುವ ಅವರ ಕುಟುಂಬ, ಮೊಹಮ್ಮದ್‌ನನ್ನು ನೋಡಲು ತುರ್ತು ವೀಸಾದಡಿ ಪ್ರಯಾಣಿಸುವಂತೆ ತಮಗೆ ಅನುಕೂಲ ಕಲ್ಪಿಸಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಲ್ಲಿ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next