Advertisement

ಭಾರತ ಮೂಲದ ತಜ್ಞನಿಂದ ಕೋವಿಡ್ ಸೋಂಕಿಗೆ ನಾಲ್ಕು ಔಷಧಿ ಅಭಿವೃದ್ಧಿ

12:07 AM May 07, 2020 | Hari Prasad |

ಅಮೆರಿಕದಲ್ಲಿ ಸಂಶೋಧಕರಾಗಿರುವ ಭಾರತ ಮೂಲದ ಕಮಲೇಂದ್ರ ಸಿಂಗ್‌ ಹಾಗೂ ಅವರ ತಂಡ, ಕೋವಿಡ್ ರೋಗವನ್ನು ನಿಯಂತ್ರಣಕ್ಕೆ ತರಬಲ್ಲ ನಾಲ್ಕು ಆ್ಯಂಟಿ ವೈರಲ್‌ ಔಷಧಿಗಳನ್ನು ಕಂಡು ಹಿಡಿದಿದ್ದಾರೆಂದು ‘ಪೆಥೋಜೆನ್ಸ್‌’ ಎಂಬ ವೈದ್ಯಕೀಯ ನಿಯತಕಾಲಿಕೆ ವರದಿ ಮಾಡಿದೆ.

Advertisement

ಕೋವಿಡ್ ವಿರುದ್ಧ ಪ್ರಾಯೋಗಿಕವಾಗಿ ಬಳಸಲಾಗುತ್ತಿರುವ ರೆಮ್‌ಡಿಸೀವರ್‌ ಔಷಧಿಯನ್ನು ಇದೇ ತಂಡ ಅಭಿವೃದ್ಧಿಪಡಿಸಿತ್ತು. ಈ ಹಿಂದೆ, ಎಬೊಲಾ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಲಾಗಿದ್ದ ರೆಮ್‌ಡಿಸೀವರ್‌ ಈಗ ಕೋವಿಡ್ ವೈರಸ್‌ ನಿಯಂತ್ರಣದಲ್ಲಿ ತಕ್ಕಮಟ್ಟಿಗೆ ಸಕಾರಾತ್ಮಕ ಫ‌ಲಿತಾಂಶ ನೀಡಿದೆ.

ಇದಲ್ಲದೆ, 5-ಫ್ಲ್ಯುರೌರೆಸಿಲ್‌, ರಿಬಾವಿರಿನ್‌ ಹಾಗೂ ಫ್ಯಾವಿಪಿರಾವಿರ್‌ ಎಂಬ ಔಷಧಿಗಳನ್ನೂ ಈ ತಂಡ ಅಭಿವೃದ್ಧಿಪಡಿಸಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

“ಇವೆಲ್ಲವೂ ಪ್ರಾಥಮಿಕ ಪರೀಕ್ಷೆಗಳಲ್ಲಿ ಉತ್ತಮ ಫ‌ಲಿತಾಂಶ ಕೊಟ್ಟಿವೆ. ಕೋವಿಡ್ ವೈರಾಣುಗಳ ಮೇಲೆ ಇವು ಮಾರಣಾಂತಿಕ ಪರಿಣಾಮ ಬೀರಿಲ್ಲವಾದರೂ, ಜಗತ್ತು ಇಂದು ಇರುವ ಪರಿಸ್ಥಿತಿಯಲ್ಲಿ ಈ ಔಷಧಿಗಳು ಆಶಾಕಿರಣಗಳಾಗಿ ಮೂಡಿಬಂದಿವೆ” ಎಂದು ಬಣ್ಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next