Advertisement

ಭಾರತ ಮೂಲದ ಲಿಯೊ 2ನೇ ಅವಧಿಗೆ ಐರ್ಲೆಂಡ್‌ ಪ್ರಧಾನಿ

07:57 PM Dec 16, 2022 | Team Udayavani |

ಡಬ್ಲಿನ್‌: ಭಾರತ ಮೂಲದ ಲಿಯೊ ವರಾಡ್ಕರ್‌ ಅವರು ಎರಡನೇ ಬಾರಿಗೆ ಐರ್ಲೆಂಡ್‌ ಪ್ರಧಾನಿಯಾಗಿ ಇದೇ ವಾರ ಪದಗ್ರಹಣ ಮಾಡಲಿದ್ದಾರೆ. ಐರ್ಲೆಂಡ್‌ನ‌ ಎರಡು ರಾಜಕೀಯ ಪಕ್ಷಗಳ ಮೈತ್ರಿಕೂಟವು ಈ ನಿರ್ಣಯ ತೆಗೆದುಕೊಂಡಿದೆ.

Advertisement

ಲಿಯೊ ವರಾಡ್ಕರ್‌(43) ಅವರ ತಂದೆ ಅಶೋಕ್‌ ಭಾರತದವರಾಗಿದ್ದು, ತಾಯಿ ಮಿರಿಯಾಮ್‌ ಐರ್ಲೆಂಡ್‌ನ‌ವರು. ಲಿಯೊ ತಮ್ಮನ್ನು ತಾವು ಸಲಿಂಗಕಾಮಿ ಎಂದು ಘೋಷಿಸಿಕೊಂಡಿದ್ದಾರೆ. ಇವರು ಐರ್ಲೆಂಡ್‌ನ‌ ಕಿರಿಯ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ದೇಶವನ್ನು ಸದೃಢವಾಗಿ ಮುನ್ನಡೆಸಿದ್ದ ಲಿಯೊ ಅವರ ಅನುಭವವನ್ನು ಪರಿಗಣಿಸಿ ಅವರನ್ನು ಎರಡನೇ ಅವಧಿಗೆ ಪ್ರಧಾನಿಯಾಗಿ ಮುಂದುವರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next