ನವದೆಹಲಿ: ನ್ಯೂಜಿಲೆಂಡ್ ಸಂಸತ್‌ಗೆ ಆಯ್ಕೆಯಾಗಿರುವ ಭಾರತೀಯ ಮೂಲದ ವೈದ್ಯ ಗೌರವ್ ಶರ್ಮಾ ಬುಧವಾರ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್‌ಪುರ್ ಮೂಲದವರಾಗಿರುವ ಗೌರವ್ ಶರ್ಮಾ, ಲೇಬರ್ ಪಾರ್ಟಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
ಗೌರವ್ ಅವರು ನ್ಯೂಜಿಲೆಂಡ್‌ನ ಅಧಿಕೃತ ಭಾಷೆ ಮೌರಿಯಲ್ಲಿ ಮತ್ತು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಅವರು ಭಾರತದ ಭಾಷಾ ವೈವಿಧ್ಯತೆಗೆ ಗೌರವ ತೋರಿಸಿದ್ದಾರೆ ಎಂದು ಕ್ರೈಸ್ಟ್‌ಚರ್ಚ್‌ನಲ್ಲಿರುವ ಭಾರತೀಯ ಹೈಕಮಿಷನರ್ ಮುಕ್ತೇಶ್ ಪ್ರದೇಶಿ ಟ್ವೀಟ್ ಮಾಡಿದ್ದಾರೆ.
ಹಿಂದಿಯನ್ನು ಬಿಟ್ಟು ಸಂಸ್ಕೃತದಲ್ಲಿಯೇ ಪ್ರಮಾಣ ಸ್ವೀಕರಿಸಿದ ಬಗ್ಗೆ ಟ್ವೀಟ್ ಮಾಡಿ ವಿವರಣೆ ನೀಡಿದ ಡಾ.ಗೌರವ್, ಮಾತೃಭಾಷೆ ಪಂಜಾಬಿಯಲ್ಲಿ ಅಥವಾ ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಬೇಕೋ ಎಂಬ ಬಗ್ಗೆ ಗೊಂದಲಗಳಿದ್ದವು. ಎಲ್ಲರನ್ನೂ ಸಂತೋಷಗೊಳಿಸಿವುದು ಕಷ್ಟ. ಸಂಸ್ಕೃತದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರೆ ನನಗೆ ಮಾತನಾಡಲು ಸಾಧ್ಯವಿಲ್ಲದ ಭಾಷೆಗಳೂ ಸೇರಿದಂತೆ ಎಲ್ಲವಕ್ಕೂ ಗೌರವ ನೀಡಿದಂತಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಬೀಗರ ಊಟಕ್ಕೆ ಆಗಮಿಸಿ ಈಜಲು ತೆರಳಿದ ಯುವಕರು; ನಾಲ್ವರು ನಾಪತ್ತೆ, ಓರ್ವನ ಮೃತದೇಹ ಪತ್ತೆ
ಇತ್ತೀಚೆಗಷ್ಟೇ ಕೇರಳ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಅವರು ಸಂಸತ್ ಸದಸ್ಯೆಯಾಗಿ ಮಲಯಾಳಂನಲ್ಲಿ ಪ್ರಮಾಣ ಸ್ವೀಕರಿಸಿದ್ದರು.