Advertisement

ಭಾರತ ಮೂಲದ ವೈದ್ಯೆಗೆ ಮಿಸ್‌ ಇಂಗ್ಲೆಂಡ್‌ ಕಿರೀಟ

01:58 AM Aug 03, 2019 | mahesh |

ಲಂಡನ್‌: ಭಾರತ ಮೂಲದ ಲಂಡನ್‌ನ ವೈದ್ಯೆ ಭಾಷಾ ಮುಖರ್ಜಿ ಅವರು ಪ್ರಸಕ್ತ ಸಾಲಿನ ಮಿಸ್‌ ಇಂಗ್ಲೆಂಡ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 23 ವರ್ಷದ ಭಾಷಾ ಅವರು 9ನೇ ವಯಸ್ಸಿನಲ್ಲೇ ತಮ್ಮ ಹೆತ್ತವರೊಂದಿಗೆ ಭಾರತ ತೊರೆದು ಯುಕೆಯಲ್ಲಿ ನೆಲೆಸಿದ್ದರು. ಗುರುವಾರ ರಾತ್ರಿ ಮಿಸ್‌ ಇಂಗ್ಲೆಂಡ್‌ 2019 ಸೌಂದರ್ಯ ಸ್ಪರ್ಧೆಯ ವಿಜೇತೆಯಾಗಿ ಇವರು ಹೊರಹೊಮ್ಮಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯಲಿರುವ 69ನೇ ಮಿಸ್‌ ವಲ್ಡ್ರ್ ಸ್ಪರ್ಧೆಯಲ್ಲೂ ಇವರು ಪಾಲ್ಗೊಳ್ಳಲಿದ್ದಾರೆ. ವಿಶೇಷವೆಂದರೆ, ಶುಕ್ರವಾರ ವಷ್ಟೇ ಇವರು ಬೋಸ್ಟನ್‌ನ ಪಿಲ್ಗ್ರಿಮ್‌ ಆಸ್ಪತ್ರೆ ಯಲ್ಲಿ ಜೂನಿಯರ್‌ ವೈದ್ಯೆಯಾಗಿ ನೇಮಕಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next