ನ್ಯೂಯಾರ್ಕ್: ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿರುವ ತಮ್ಮ ಐಷಾರಾಮಿ ಮನೆಯಲ್ಲಿ ಭಾರತೀಯ ಮೂಲದ ದಂಪತಿಗಳು ಮತ್ತು ಅವರ ಹದಿಹರೆಯದ ಮಗಳು ಶವವಾಗಿ ಪತ್ತೆಯಾಗಿದ್ದಾರೆ.
ರಾಕೇಶ್ ಕಮಲ್ (57), ಅವರ ಪತ್ನಿ ಟೀನಾ (54) ಮತ್ತು ಅವರ ಮಗಳು ಅರಿಯಾನಾ (18) ಅವರ ಶವಗಳು ಡೋವರ್‌ನಲ್ಲಿರುವ ಅವರ ನಿವಾಸದಲ್ಲಿ ರಾತ್ರಿ 7.30 ರ ಸುಮಾರಿಗೆ ಪತ್ತೆಯಾಗಿವೆ ಎಂದು ನಾರ್ಫೋಕ್ ಜಿಲ್ಲಾ ಅಟಾರ್ನಿ (ಡಿಎ) ಮೈಕೆಲ್ ಮೊರಿಸ್ಸೆ ತಿಳಿಸಿದ್ದಾರೆ. ಡೋವರ್ ಮ್ಯಾಸಚೂಸೆಟ್ಸ್‌ನ ರಾಜಧಾನಿ ಬೋಸ್ಟನ್‌ನಿಂದ ನೈಋತ್ಯಕ್ಕೆ 32 ಕಿಲೋಮೀಟರ್ ದೂರದಲ್ಲಿದೆ.
ಟೀನಾ ಮತ್ತು ಅವರ ಪತಿ ಮೊದಲು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಡುನೋವಾ ಎಂಬ ಕಂಪನಿಯನ್ನು ನಡೆಸುತ್ತಿದ್ದರು ಅದನ್ನು ನಂತರ ಮುಚ್ಚಲಾಯಿತು ಎನ್ನಲಾಗಿದ್ದು. ಈ ಘಟನೆಯನ್ನು ‘ಕೌಟುಂಬಿಕ ಹಿಂಸಾಚಾರ’ ಎಂದು ಬಣ್ಣಿಸಿದ ಜಿಲ್ಲಾಧಿಕಾರಿ, ಕಮಲ್ ಶವದ ಬಳಿ ಬಂದೂಕು ಪತ್ತೆಯಾಗಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಮೂವರು ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿ ಮಾಡಿದೆ. ಆದರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೇ ಎಂಬುದರ ಕುರಿತು ಪ್ರತಿಕ್ರಿಯಿಸುವ ಮೊದಲು ವೈದ್ಯಕೀಯ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಈ ನಡುವೆ ದಂಪತಿಗಳು ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Udupi: ಪ್ರಸಿದ್ಧ ಬಟ್ಟೆ ಮಳಿಗೆಯಲ್ಲಿ ಮಿಸ್ ಫೈರಿಂಗ್; ಓರ್ವ ಸಿಬ್ಬಂದಿಗೆ ಗಾಯ