Advertisement

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ಉದ್ಯಮಿ ಪಟೇಲ್ ಗುಂಡೇಟಿಗೆ ಬಲಿ

01:13 PM Mar 04, 2017 | Sharanya Alva |

ನ್ಯೂಯಾರ್ಕ್:ಕಳೆದ ವಾರ ಭಾರತೀಯ ಇಂಜಿನಿಯರ್ ಅನ್ನು ಅಮೆರಿಕದಲ್ಲಿ ಹತ್ಯೆಗೈದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮತ್ತೊಬ್ಬ ಭಾರತೀಯ ಮೂಲದ ಉದ್ಯಮಿಯನ್ನು ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕದ ದಕ್ಷಿಣ ಕೆರೋಲಿನಾದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಗುರುವಾರ ರಾತ್ರಿ 11.24ರ ಸಮಯಕ್ಕೆ ಹರ್ನಿಶ್ ಪಟೇಲ್(43ವರ್ಷ) ಅವರು ತಮ್ಮ ಮಳಿಗೆಯನ್ನು ಮುಚ್ಚಿದ್ದರು. ಅದಾದ ಸುಮಾರು 10 ನಿಮಿಷದ ನಂತರ ಅವರ ಮನೆಯ ಹೊರಭಾಗದಲ್ಲಿ ಪಟೇಲ್ ಅವರನ್ನು ಗುಂಡಿಟ್ಟು ಹತ್ಯೆಗೈದಿರುವ ಪ್ರಕರಣ ನಡೆದಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.

ಕಳೆದ ವಾರ ಕಾನ್ಸಾಸ್ ನ ಬಾರ್ ವೊಂದರಲ್ಲಿ ಇಂಜಿನಿಯರ್ ಶ್ರೀನಿವಾಸ ಕುಚಿಭೋತ್ಲಾ ಅವರನ್ನು ದುಷ್ಕರ್ಮಿಯೊಬ್ಬ ನೀನು ನನ್ನ ದೇಶದಿಂದ ಹೊರಹೋಗು ಎಂದು ಆಕ್ರೋಶ ವ್ಯಕ್ತಪಡಿಸಿ ಹತ್ಯೆಗೈದಿದ್ದ ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದರು. ಟ್ರಂಪ್ ಹೇಳಿಕೆ ನೀಡಿ 2 ದಿನಗಳ ಬಳಿಕ ಮತ್ತೊಬ್ಬ ಭಾರತೀಯನ ಹತ್ಯೆ ನಡೆದಿರುವುದು ಭಾರತೀಯ ಮೂಲದವರಿಗೆ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.

ಪಟೇಲ್ ಅವರ ಹತ್ಯೆಯ ತನಿಖೆ ಮುಂದುವರಿದಿದೆ. ಇದೊಂದು ಜನಾಂಗೀಯ ದ್ವೇಷದ ಹತ್ಯೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಲ್ಯಾನ್ ಸ್ಟರ್ ನ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ಹೆರಾಲ್ಡ್ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next