Advertisement
ಏನಿದು ಹಡಗು ಕಟ್ಟೆ ಡ್ರೈ ಡಾಕ್ ಎಂದು ಇದನ್ನು ಕರೆಯಲಾಗುತ್ತದೆ. ಹಡಗುಗಳನ್ನು ರಿಪೇರಿ ಮಾಡಬೇಕಾದರೆ ಅದನ್ನು ಎತ್ತರಿಸಿದ ಸ್ಥಳದಲ್ಲಿ ನಿಲ್ಲಿಸಬೇಕು. ನೀರಿನಲ್ಲೇ ಇದ್ದರೆ ದೊಡ್ಡ ಮಟ್ಟದ ರಿಪೇರಿಗಳು ಸಾಧ್ಯವಿಲ್ಲ. ಇದಕ್ಕೆ ಡ್ರೈ ಡಾಕ್ ಎಂದು ಕರೆಯುವ ಕಟ್ಟೆಗಳು ಬೇಕು. ಸದ್ಯ ನೌಕಾಪಡೆ ಬಳಿ ಹಲವು ಕಟ್ಟೆಗಳಿದ್ದರೂ ಐಎನ್‌ಎಸ್ ವಿಕ್ರಮಾದಿತ್ಯ ರೀತಿಯ ಅತಿ ಭಾರದ, ಅತಿ ದೊಡ್ಡ ಯುದ್ಧವಿಮಾನ ವಾಹಕ ನೌಕೆ ರಿಪೇರಿ ಮಾಡುವ ವ್ಯವಸ್ಥೆಯಿಲ್ಲ.
ಹಡಗು ಕಟ್ಟೆಗಳಲ್ಲಿ ಗೇಟ್‌ಗಳಿದ್ದು ಇದು ನೀರನ್ನು ಒಳಬಿಟ್ಟುಕೊಳ್ಳುತ್ತದೆ. ರಿಪೇರಿ ಮಾಡಬೇಕಾದ ಹಡಗು ಬಂದು ನಿಂತ ನಂತರ ಕಟ್ಟೆಯಲ್ಲಿರುವ ನೀರನ್ನು ಖಾಲಿ ಮಾಡಲಾಗುತ್ತದೆ. ಇದರಿಂದ ಹಡಗಿನ ತಳದಲ್ಲಿ ರಿಪೇರಿ ಮಾಡುವುದು ಸುಲಭವಾಗುತ್ತದೆ. ಹೇಗಿದೆ ಹೊಸ ಹಡಗು ಕಟ್ಟೆ ?
ಒಟ್ಟು 281 ಮೀಟರ್ ಉದ್ದ, 45 ಮೀ. ಅಗಲ ಮತ್ತು 17 ಮೀ. ಆಳವನ್ನು ಹೊಸ ಹಡಗು ಕಟ್ಟೆ ಹೊಂದಿದೆ. ಇದರಲ್ಲಿ ವಿಕ್ರಮಾದಿತ್ಯನಂತಹ ಯುದ್ಧವಿಮಾನ ವಾಹಕ ನೌಕೆ ಜತೆಗೆ ಇನ್ನೆರಡು ಸಣ್ಣ ನೌಕೆಯನ್ನೂ ಅಗತ್ಯ ಬಿದ್ದರೆ ಒಂದೇ ಸಲ ರಿಪೇರಿಗಾಗಿ ನಿಲ್ಲಿಸಲು ಅವಕಾಶವಿದೆ. ಸುಮಾರು 20 ಕೋಟಿ ಲೀ. ನೀರು ಹಿಡಿದುಡುತ್ತದೆ. 90 ಸಾವಿರ ಟನ್‌ವರೆಗೆ ಹಡಗುಗಳ ಭಾರ ತಡೆಯಬಲ್ಲದು. ಇದರಲ್ಲಿ ನೀರು ಖಾಲಿ ಮಾಡಲು ದೊಡ್ಡ ವಾಲ್Ìಗಳಿವೆ. 90 ನಿಮಿಷದಲ್ಲಿ ನೀರು ತುಂಬಿದರೆ ಖಾಲಿ ಮಾಡಲು 2.5 ಗಂಟೆ ಬೇಕಾಗುತ್ತದೆ.
Related Articles
ದೇಶ ರಕ್ಷಣೆ ಮತ್ತು ತುರ್ತು ಪರಿಸ್ಥಿತಿ ಸಂದರ್ಭ ಹಡಗು ರಿಪೇರಿಗೆ ಇಂತಹ ಕಟ್ಟೆ ಅಗತ್ಯ ಹೆಚ್ಚು. ಕಟ್ಟೆಯ ಮಧ್ಯೆ ಗೇಟ್‌ಗಳಿದ್ದು, ಪ್ರತ್ಯೇಕ ಪ್ರತ್ಯೇಕವಾಗಿ ನಿಲ್ಲಿಸಿಕೊಲ್ಲಬಹುದು. ಇದರಿಂದ ಖಾಸಗಿ ಹಡಗು ಕಟ್ಟೆಗಳನ್ನು ಆಶ್ರಯಿಸುವುದು ತಪ್ಪುತ್ತದೆ. ಅಲ್ಲದೇ ಶೀಘ್ರ ರಿಪೇರಿ ಅಗತ್ಯವಿದ್ದಾಗ ಕೆಲಸ ವಿಳಂಬವಾಗುವುದು ತಪ್ಪುತ್ತದೆ. ಖಾಸಗಿ ಹಡಗು ಕಟ್ಟೆಗಳಿಗೆ ದಿನಕ್ಕೆ 10 ಲಕ್ಷ ರೂ. ಬಾಡಿಗೆ ಇದ್ದು, ಇದರಿಂದ ಬೊಕ್ಕಸಕ್ಕೆ ಭಾರ. ಈಗಾಗಲೇ ನೌಕಾಪಡೆಯ 3 ಹಡಗುಕಟ್ಟೆಗಳಿದ್ದರೂ ಅದು ಬ್ರಿಟಿಷ್ ಕಾಲದ್ದು. ಇದರಲ್ಲಿ ಅತಿ ದೊಡ್ಡ ನೌಕೆ ರಿಪೇರಿ ಸಾಧ್ಯವಿಲ್ಲದಾಗಿದೆ.
Advertisement
1 ಸಾವಿರ ಕೋಟಿ ರೂ. ವೆಚ್ಚ 281 ಮೀ.ನ ಈ ಕಟ್ಟೆ ನಿರ್ಮಾಣಕ್ಕೆ 1 ಸಾವಿರ ಕೋಟಿ ರೂ. ವೆಚ್ಚವಾಗಿದೆ. 114 ಭಾರೀ ಗಾತ್ರದ ಕಬ್ಬಿಣದ ತೊಲೆಗಳನ್ನು ಬಳಸಲಾಗಿದೆ. 90 ಫುಟ್ಬಾಲ್ ಮೈದಾನದಷ್ಟು ದೊಡ್ಡದಾಗಿದೆ. 8000 ಮೆಟ್ರಿಕ್ ಟನ್ ಕಬ್ಬಿಣ ಮತ್ತು 5 ಮೆಟ್ರಿಕ್ ಟನ್ ಕಾಂಕ್ರೀಟ್ ಬಳಸಲಾಗಿದೆ.