ನವದೆಹಲಿ: ಎರಡು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.
ಬಂಗಾಳ ಕೊಲ್ಲಿಯಲ್ಲಿ ನಿಯೋಜಿಸಲಾದ ಭಾರತೀಯ ನೌಕಾಪಡೆಯ ಹಡಗು ಖಂಜಾರ್, ತಮಿಳುನಾಡು ಕರಾವಳಿಯಿಂದ 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿದೆ ಎಂದು ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ತಿಳಿಸಿದ್ದಾರೆ.
ತಮಿಳುನಾಡು ಕರಾವಳಿಯಿಂದ ಸುಮಾರು 130 ನಾಟಿಕಲ್ ದೂರದಲ್ಲಿ ಮೂರು ಮೀನುಗಾರಿಕಾ ಹಡಗುಗಳಾದ ಶಬರನಾಥನ್, ಕಲೈವಾಣಿ ಮತ್ತು ವಿ ಸಾಮಿ ಸಿಲುಕಿಕೊಂಡಿತ್ತು.
ಪ್ರತಿಕೂಲ ಹವಾಮಾನದಿಂದಾಗಿ ಸಿಲುಕಿಕೊಂಡಿದ್ದ ಮೂರು ಮೀನುಗಾರಿಕಾ ಹಡಗುಗಳಲ್ಲಿದ್ದ ಮೀನುಗಾರರನ್ನು ಸುಮಾರು 30 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಶುಕ್ರವಾರ ಸುರಕ್ಷಿತವಾಗಿ ಚೆನ್ನೈ ಬಂದರಿಗೆ ಕರೆತಂದಿದ್ದಾರೆ.
36 ಮೀನುಗಾರರಿದ್ದ ಹಡಗುಗಳು ತಮಿಳುನಾಡಿನ ನಾಗಪಟ್ಟಣಂನಿಂದ ಮೀನುಗಾರಿಕೆಗೆ ತೆರಳಿತ್ತು ಬಳಿಕ ಪ್ರತಿಕೂಲ ಹವಾಮಾನದ ಪರಿಣಾಮ ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದರು.
ಇದನ್ನೂ ಓದಿ: Tamilnadu: ಸುಪ್ರೀಂ ಸಿಜೆಐ ವಿರುದ್ಧ ಪ್ರಚೋದನಕಾರಿ ಹೇಳಿಕೆ- ಲೇಖಕ ಬದ್ರಿ ಶೇಷಾದ್ರಿ ಬಂಧನ