ಮುಂಬಯಿ : ಭಾರತೀಯ ನೌಕಾಪಡೆಯು ಮೊದಲ ‘ಪಿ 15ಬಿ ಮಾರ್ಗದರ್ಶಿ-ಕ್ಷಿಪಣಿ ವಿಧ್ವಂಸಕ’ವನ್ನು ಗುರುವಾರ ‘ಮೊರ್ಮುಗೋ’ ಡಾಕ್ ಶಿಪ್ ಉತ್ಪಾದಕ ಸಂಸ್ಥೆಯಿಂದ ಪಡೆದಿದೆ.
ಕೇಂದ್ರ ಸರಕಾರ ಮತ್ತು ನೌಕಾಪಡೆ ಸ್ಥಳೀಯವಾಗಿ ಯುದ್ಧನೌಕೆಗಳ ನಿರ್ಮಾಣ ಕಾರ್ಯಕ್ರಮಗಳಿಗೆ ನೀಡಿದ ಪ್ರೇರಣೆಯ ಮತ್ತೊಂದು ಪುರಾವೆ ಇದಾಗಿದೆ ಎಂದು ನೌಕಾ ಪಡೆ ಹೇಳಿಕೊಂಡಿದೆ.
ಕ್ಷಿಪಣಿ ವಿಧ್ವಂಸಕ ‘ವಿಶಾಖಪಟ್ಟಣಂ’ ಹೆಸರಿನ ಶಿಪ್ ತನ್ನ ಡೆಕ್‌ನಿಂದ ವಿಮಾನ ವಿರೋಧಿ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
”ಕ್ಷಿಪಣಿ ವಿಧ್ವಂಸಕ ನೌಕೆಯು ಭಾರತೀಯ ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಿದೆ ಮಾತ್ರವಲ್ಲದೆ ಆತ್ಮನಿರ್ಭರ್ ಭಾರತ್ ಗಾಗಿ ನಮ್ಮ ಅನ್ವೇಷಣೆಯ ಪ್ರಮುಖ ಪ್ರಗತಿಯಾಗಿದೆ,” ಎಂದು ನೌಕಾ ಪಡೆ ಹೇಳಿಕೊಂಡಿದೆ.