Advertisement
ರಕ್ಷಣಾ ವ್ಯವಹಾರಗಳ ಮೇಲುಸ್ತುವಾರಿಯ ಸ್ಥಾಯಿ ಸಮಿತಿಯು ಕೇಂದ್ರಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ಈ ವಿಚಾರ ತಿಳಿಸಿದೆ. ಈ ಎಲ್ಲ ಜಲಾಂತರ್ಗಾಮಿಗಳನ್ನೂ ಭಾರತೀಯ ಖಾಸಗಿ ಕಂಪೆನಿಗಳ ಸಹಯೋಗದಲ್ಲಿ ಸಂಪೂರ್ಣ ದೇಶೀಯವಾಗಿ ಉತ್ಪಾದಿಸಲು ತೀರ್ಮಾ ನಿಸಲಾಗಿದೆ.
ಸದ್ಯಕ್ಕೆ ಭಾರತೀಯ ನೌಕಾಪಡೆಯಲ್ಲಿ 15 ಸಾಂಪ್ರದಾಯಿಕ ಹಾಗೂ ಒಂದು ಪರಮಾಣು ಜಲಾಂತರ್ಗಾಮಿ (ಐಎನ್‌ಎಸ್ ಚಕ್ರ) ಇವೆ. ಜಲಾಂತರ್ಗಾಮಿಯ ಸೇವೆಯನ್ನು ರಷ್ಯಾದಿಂದ ಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿದೆ. ಈ ಸಮೂಹಕ್ಕೆ, ಹೊಸದಾಗಿ 18 ಸಾಂಪ್ರದಾಯಿಕ, 6 ಪರಮಾಣು ಜಲಾಂತರ್ಗಾಮಿಗಳು ಸೇರ್ಪಡೆಗೊಳ್ಳಲಿವೆ.