Advertisement
ಬೆಳಕಿನ ಪುಂಜಎಯುಡಿಎಫ್ಎಸ್01 ಎಂಬ ನಕ್ಷತ್ರಪುಂಜದಿಂದ ಭಾರೀ ಪ್ರಮಾಣದಲ್ಲಿ ಅತಿನೇರಳೆ ಕಿರಣಗಳು ಹೊರಹೊಮ್ಮುತ್ತಿರುವುದನ್ನು ಈ ಉಪಗ್ರಹ ಪತ್ತೆಹಚ್ಚಿದೆ. ಈ ನಕ್ಷತ್ರಪುಂಜವು ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಐಯುಸಿಎಎ ಸಂಸ್ಥೆಯ ಸಹಾಯಕ ಪ್ರೊಫೆಸರ್ ಡಾ| ಕನಕ್ ಸಾಹಾ ನೇತೃತ್ವದ ತಂಡವು ಈ ಸಾಧನೆ ಮಾಡಿದ್ದು, ತಂಡದಲ್ಲಿ ಭಾರತ, ಫ್ರಾನ್ಸ್, ಸ್ವಿಜರ್ಲೆಂಡ್, ಯುಎಸ್‌ಎ, ಜಪಾನ್ ಮತ್ತು ನೆದರ್ಲೆಂಡ್‌ನ ವಿಜ್ಞಾನಿಗಳಿದ್ದಾರೆ.
2016ರ ಅಕ್ಟೋಬರ್ ತಿಂಗಳಲ್ಲೇ ವಿಜ್ಞಾನಿಗಳ ತಂಡವು ಇದನ್ನು ಪತ್ತೆ ಹಚ್ಚಿತಾದರೂ ಈ ಕಿರಣಗಳು ಹೊರಬರುತ್ತಿರುವುದು ಅದೇ ನಕ್ಷತ್ರಪುಂಜದಿಂದ ಎಂಬುದನ್ನು ಸಾಬೀತುಪಡಿಸಲು 2 ವರ್ಷಗಳು ಹಿಡಿದವು. ಭೂಮಿಯ ವಾತಾವರಣವು ಅತಿನೇರಳೆ ವಿಕಿರಣಗಳನ್ನು ಹೀರಿಕೊಳ್ಳುವ ಕಾರಣ, ಬಾಹ್ಯಾಕಾಶದಿಂದಲೇ ಅದನ್ನು ಅವಲೋಕಿಸುವ ಅಗತ್ಯವಿತ್ತು. ಅಲ್ಲದೆ, ಈ ಹಿಂದೆ ನಾಸಾದ ಹಬಲ್ ಟೆಲಿಸ್ಕೋಪ್ ಕೂಡ ಇದೇ ತಾರಾಪುಂಜದಿಂದ ವಿಕಿರಣ ಹೊರಸೂಸುತ್ತದೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಿ, ವಿಫಲವಾಗಿತ್ತು.
ಹೀಗಾಗಿ, ಆ್ಯಸ್ಟ್ರೋಸ್ಯಾಟ್ ಇಂಥದ್ದೊಂದು ಸಾಧನೆ ಮಾಡಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಲು ಸ್ವಲ್ಪ ಸಮಯ ತಗಲಿತು ಎಂದು ಸಾಹಾ ಹೇಳಿದ್ದಾರೆ. – ಆ್ಯಸ್ಟ್ರೋಸ್ಯಾಟ್ ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹ
Related Articles
Advertisement
– ತಾರಾಪುಂಜದಿಂದ ಹೊರಸೂಸುವ ಅತಿನೇರಳೆ ಕಿರಣಗಳನ್ನು ಇದು ಪತ್ತೆಹಚ್ಚಿದೆ
– ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಈ ನಕ್ಷತ್ರಪುಂಜ
– 2016ರ ಅಕ್ಟೋಬರ್‌ನಲ್ಲಿ ನಡೆದಿತ್ತು ಬೆಳವಣಿಗೆ. 28 ಗಂಟೆಗಳಿಗೂ ಹೆಚ್ಚು ಕಾಲ ಅತಿನೇರಳೆ ಕಿರಣ ಹೊರಸೂಸುತ್ತಿದ್ದ ತಾರಾಪುಂಜ.
ಈ ಬ್ರಹ್ಮಾಂಡದ ಕಗ್ಗತ್ತಲ ಯುಗ ಅಂತ್ಯವಾದದ್ದು ಯಾವಾಗ ಮತ್ತು ಅಲ್ಲಿ ಬೆಳಕಿನ ಕಿರಣ ಮೂಡಿದ್ದು ಯಾವಾಗ ಎಂಬುದರ ಸುಳಿವು ನೀಡುವಲ್ಲಿ ಈ ಆವಿಷ್ಕಾರವು ನೆರವಾಗಲಿದೆ. ಬೆಳಕಿನ ಆರಂಭಿಕ ಮೂಲವನ್ನು ಪತ್ತೆಹಚ್ಚುವುದು ಕಷ್ಟವಾದರೂ ಇಂಥದ್ದೊಂದು ಮಹತ್ವದ ಸಾಧನೆ ಮಾಡಿದವರನ್ನು ಅಭಿನಂದಿಸುತ್ತೇನೆ.– ಡಾ| ಸೋಮಕ್ ರಾಯ್ ಚೌಧರಿ, ಐಯುಸಿಎಎ ನಿರ್ದೇಶಕ